Cnewstv.in / 23.01.2022 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಅಭಿವೃದ್ಧಿಯಲ್ಲಿ ರಾಜ್ಯಕ್ಕೆ ಶಿವಮೊಗ್ಗ ಮೊದಲ ಸ್ಥಾನದಲ್ಲಿ ನಿಲ್ಲಲಿದೆ : ಸಂಸದ ಬಿ. ವೈ. ರಾಘವೇಂದ್ರ.
ಶಿವಮೊಗ್ಗ : ನಮ್ಮ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ವಿವಿಧ ಆಯಾಮದ ಅಭಿವೃದ್ಧಿಯ ಕೆಲಸಗಳ ಕಾರ್ಯವು ಪ್ರಗತಿಯಲ್ಲಿದೆ, ವಿಶ್ವವಿದ್ಯಾಲಯಗಳು, ಆಸ್ಪತ್ರೆಗಳು, ವಿಮಾನ ನಿಲ್ದಾಣ, ರೈಲ್ವೇ ಮೇಲ್ಸೇತುವೆ, ನೂತನ ಶಿವಮೊಗ್ಗ – ರಾಣೇಬೆನ್ನೂರು ಮಾರ್ಗ, ಕೋಟೆಗಂಗೂರಿನಲ್ಲಿ ರೈಲ್ವೇ ಟರ್ಮಿನಲ್, ಜಿಲ್ಲೆಯ ಸಂಪರ್ಕ ಹೆಚ್ಚಿಸಲು ನ್ಯಾಷನಲ್ ಹೈವೇ ಮತ್ತು ಉತ್ತಮ ರೈಲ್ವೇ ಸಂಪರ್ಕದ ಕೆಲಸಗಳು ವೇಗದಿಂದ ಸಾಗುತ್ತಿದೆ ಮುಂದಿನ ದಿನದಲ್ಲಿ ಶಿವಮೊಗ್ಗವು ಅಭಿವೃದ್ಧಿಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿ ಇರಲಿದೆ ಎಂದು ಸಂಸದರಾದ ಬಿ. ವೈ ರಾಘವೇಂದ್ರ ಅವರು ತಿಳಿಸಿದರು.
ಶಿವಮೊಗ್ಗ ನಗರದ ತೆರಳ ಬಾಳು ಸಾಂಸ್ಕೃತಿಕ ಕೇಂದ್ರದ ನೂತನ ಕಟ್ಟಡದ ಕಾಮಗಾರಿಯನ್ನು ವೀಕ್ಷಿಸಿ ಚೆಕ್ ಹಸ್ತಾಂತರಿಸಿ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯರಾದ ರುದ್ರೇಗೌಡರು, APMC ಅಧ್ಯಕ್ಷರಾದ ಜಗದೀಶ್, ಶಿವಮೊಗ್ಗ ಲಿಂಗಾಯತ ಸಮಾಜದ ಅಧ್ಯಕ್ಷರಾದ ಹಂಜಿ ರುದ್ರಪ್ಪ, ಓಂಕಾರಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಷಡಾಕ್ಷರಿ, ಜ್ಯೋತಿ ಪ್ರಕಾಶ್, ಮಂಗೋಟೆ ರುದ್ರೇಶ್, ಮತ್ತು ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಇದನ್ನು ಒದಿ : https://cnewstv.in/?p=7853
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv