Cnewstv.in / 23.01.2022 / ಬೆಂಗಳೂರು /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಟ್ವೀಟ್ ವಾರ್ : ನೆನ್ನೆ ಜೆಡಿಎಸ್, ಇಂದು ಬಿಜೆಪಿ. ಸಿದ್ದು ವಿರುದ್ಧ ಗರಂ.
ಬೆಂಗಳೂರು : ನೆನ್ನೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹೆಚ್.ಡಿ.ಕುಮಾರ ಸ್ವಾಮಿ ಗುಡುಗಿದರು. ಅದೇ ಬೆನ್ನಲ್ಲೇ ಬಿಜೆಪಿ ಕರ್ನಾಟಕ ಟ್ವಿಟ್ಟರ್ ಮೂಲಕ ಸಿದ್ದರಾಮಯ್ಯನವರ ಮೇಲೆ ಮುಗಿಬಿದ್ದು ಸರಣಿ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಕರ್ನಾಟಕ ಟ್ವೀಟ್..
ದೇಶಾದ್ಯಂತ ಕಾಂಗ್ರೆಸ್ ಹಡಗನ್ನು ಮುಳುಗಿಸಲು ನಿಮ್ಮಂತಹ ನಾಯಕರ ಅಗತ್ಯವಿದೆ.
ಮಾನ್ಯ ಸಿದ್ದರಾಮಯ್ಯ ಅವರೇ, ನೀವು ರಾಜಕೀಯ ನಿವೃತ್ತಿ ನೀಡಬೇಡಿ.ದೇಶಾದ್ಯಂತ ಕಾಂಗ್ರೆಸ್ ಹಡಗನ್ನು ಮುಳುಗಿಸಲು ನಿಮ್ಮಂತಹ ನಾಯಕರ ಅಗತ್ಯವಿದೆ. ಅಂದ ಹಾಗೆ ನೀವು ನಯಾಪೈಸೆ ಲಂಚ ತೆಗೆದುಕೊಂಡಿಲ್ಲ ಎಂದು ಹೇಳಿದ್ದೀರಿ. ಹಾಗಾದರೆ ಹ್ಯೂಬ್ಲೋಟ್ ವಾಚ್ ಬಂದಿದ್ದೆಲ್ಲಿಂದ?
ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಅವರು ತಮ್ಮ ಸುತ್ತಲೂ ಭ್ರಷ್ಟರ ದಂಡನ್ನೇ ಇಟ್ಟುಕೊಂಡಿದ್ದರು.??ಸಿದ್ದರಾಮಯ್ಯ ಅವರ ಆತ್ಮೀಯರೆಲ್ಲರ ಮೇಲೂ ಕಪ್ಪ ಹಣ ಸಂಗ್ರಹಣೆ ಆರೋಪವಿತ್ತು. ?? ಸಿದ್ದರಾಮಯ್ಯನವರೇ, ನಿಮ್ಮ ಸಲಹೆಗಾರರೊಬ್ಬರ ಐಟಿ ದಾಳಿಯಾದಾಗ ರಾತ್ರಿ ಬಂದು ನಿಮ್ಮ ಮುಂದೆ ಕಣ್ಣೀರು ಸುರಿಸಿದ್ದು ನೆನಪಿದೆಯೇ? ಅದಕ್ಕೇನು ಹೇಳುತ್ತೀರಿ?
ಜಾರ್ಜ್, ಮಹಾದೇವಪ್ಪ, ಗೋವಿಂದರಾಜು, ಕೆಂಪಯ್ಯ ಇವರೆಲ್ಲ ನಿಮ್ಮ ಅತ್ಯಾಪ್ತರಲ್ಲವೇ ಸಿದ್ದರಾಮಯ್ಯ
ಇವರೆಲ್ಲರ ಮೇಲೆ ಐಟಿ ದಾಳಿ ನಡೆದಿದ್ದನ್ನು ನೆನಪಿಸಿಕೊಳ್ಳಿ. ನೀವು ಭ್ರಷ್ಟಾಚಾರ ನಡೆಸಿಲ್ಲವೆಂದು ಎದೆತಟ್ಟಿ ಹೇಳಿರಬಹುದು.
ಆದರೆ ಭ್ರಷ್ಟ ಹಣ ಸಂಗ್ರಹಕ್ಕೆ ಸುತ್ತಲೂ ವ್ಯವಸ್ಥೆ ರೂಪಿಸಿಕೊಂಡಿಲ್ಲವೆಂದು ಹೇಳುವ ಧೈರ್ಯವಿದೆಯೇ?
ಒಟ್ಟಿನಲ್ಲಿ ಸಿದ್ದರಾಮಯ್ಯ ಅವರು ಆಡಿದ ಮಾತಿನಿಂದಾಗಿ ಇದೀಗ ಎರಡು ಪಕ್ಷಗಳು ಸಿದ್ದರಾಮಯ್ಯ ಮೇಲೆ ಮುಗಿ ಬಿದ್ದಿದೆ ಸರಣಿ ಟ್ವೀಟ್ ಗಳ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ಇದನ್ನು ಒದಿ : https://cnewstv.in/?p=7842
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv