Breaking News

ಹೊಸಮನೆ ಬಡಾವಣೆಯಲ್ಲಿ ಸರಗಳ್ಳತನ.. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ!!, ವಿಡಿಯೋ ವೈರಲ್..

Cnewstv.in / 22.01.2022/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಹೊಸಮನೆ ಬಡಾವಣೆಯಲ್ಲಿ ಸರಗಳ್ಳತನ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ, ವಿಡಿಯೋ ವೈರಲ್.

ಶಿವಮೊಗ್ಗ : ಹೊಸಮನೆ ಬಡಾವಣೆಯಲ್ಲಿ ಮಹಿಳೆಯೊಬ್ಬರ ಸರಗಳ್ಳತನ ವಾಗಿದ್ದು ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಬಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೊಸಮನೆ ಬಡಾವಣೆಯ ಚರ್ಚ್ ಬಳಿ ಮಂಗಳ ಎಂಬ ಮಹಿಳೆ ಸಂಜೆ ವಾಕಿಂಗ್ ಮುಗಿಸಿ ಮನೆಗೆ ಹಿಂತಿರುಗುವಾಗ ಅವರ ಕೊರಳಿನಲ್ಲಿದ್ದ 55 ಗ್ರಾಂ ಚಿನ್ನದ ಸರವನ್ನು ಬೈಕಿನಲ್ಲಿ ಬಂದ ಯುವಕರು ಕಿತ್ತು ಪರಾರಿಯಾಗಿದ್ದಾರೆ.

ಈ ಮಹಿಳೆಯ ಚಲನವಲನಗಳನ್ನು ಗಮನಿಸುತ್ತಿದ್ದ ಇಬ್ಬರು ಯುವಕರು ಮಹಿಳೆ ಬರುವಾಗ ಸರವನ್ನು ಕಿತ್ತು ಪರಾರಿಯಾಗಿದ್ದಾರೆ. ಈ ದೃಶ್ಯಾವಳಿಗಳು ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಗರದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ.‌

ಇದನ್ನು ಒದಿ : https://cnewstv.in/?p=7837

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*