Breaking News

ಕೊರೊನಾ ನಡುವೆಯೇ ವಕ್ಕರಿಸಿದ ಕೆ.ಎಫ್.ಡಿ ವೈರಸ್

Cnewstv.in / 21.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಕೊರೊನಾ ನಡುವೆಯೇ ವಕ್ಕರಿಸಿದ ಕೆ.ಎಫ್.ಡಿ ವೈರಸ್

ಶಿವಮೊಗ್ಗ : ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಈಗಾಗಲೇ ಸಾವಿರ ಗಡಿಯನ್ನು ದಾಟಿದೆ. ಶಾಲಾ ಮಕ್ಕಳಿಗೂ ಹಾಗೂ ಶಿಕ್ಷಕರಿಗೂ ಸಹ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇದೆಲ್ಲದರ ಮಧ್ಯ ಜಿಲ್ಲೆಯಲ್ಲಿ ಮತ್ತೆ ಸದ್ದಿಲ್ಲದೇ ಕೆ ಎಫ್ ಡಿ (ಕ್ಯಾಸನೂರು ಫಾರೆಸ್ಟ್ ಡಿಸೀಸ್) ಸದ್ದು ಮಾಡಲು ಆರಂಭಿಸಿದೆ.

ಮಲೆನಾಡು ಭಾಗದ ಜನರು ಕೆ ಎಫ್ ಡಿ (ಕ್ಯಾಸನೂರು ಫಾರೆಸ್ಟ್ ಡಿಸೀಸ್) ಯಿಂದ ಹೈರಾಣಾಗಿದ್ದರು. ಇದೀಗ ಮತ್ತೆ ಮಲೆನಾಡಿನ ಅರಣ್ಯದಂಚಿನ ಗ್ರಾಮಗಳಲ್ಲಿ ಕೆ.ಎಫ್.ಡಿ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದು ಜನರ ನಿದ್ದೆಗೆಡಿಸಲು ಆರಂಭಿಸಿದೆ.

ತೀರ್ಥಹಳ್ಳಿ ತಾಲೂಕಿನ ಮಾಳೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕೂಡಿಗೆ ಗ್ರಾಮದ 57 ವರ್ಷದ ಮಹಿಳೆಗೆ ಕೆ ಎಫ್ ಡಿ ಸೋಂಕು ದೃಢಪಟ್ಟಿದೆ. ಪ್ರಸ್ತುತ ಮಹಿಳೆಯು ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೊನ್ನೆ ಮೊನ್ನೆಯಷ್ಟೇ ಶಿವಮೊಗ್ಗದ ಸಾಗರ ತಾಲೂಕಿನ ಅರಳಗೋಡು ಗ್ರಾಮದಲ್ಲಿ ಆರೋಗ್ಯ ಇಲಾಖೆ ಸರ್ವೇಕ್ಷಣೆ ನಡೆಸುವಾಗ ಉಣುಗುಗಳಲ್ಲಿ ಪಾಸಿಟಿವ್ ದೃಢಪಟ್ಟಿತ್ತು. ಮತ್ತೆ ಮಲೆನಾಡು ಭಾಗದ ಜನರಲ್ಲಿ ಕೆ.ಎಫ್.ಡಿ ಸೋಂಕಿನ ಭಯ ಕಾಡಲಾರಂಭಿಸಿದೆ.

ಇದನ್ನು ಒದಿ : https://cnewstv.in/?p=7804

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*