Cnewstv.in / 21.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ರಕ್ಷಿಸಿದ ಎಎಸ್ಐ.
ಶಿವಮೊಗ್ಗ : ವ್ಯಕ್ತಿಯೊಬ್ಬನು ತುಂಗಾನದಿಯ ಹಳೇ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ಟ್ರಾಫಿಕ್ ಪೋಲಿಸ್ ಠಾಣೆಯ ಎಎಸ್ಐ ಶ್ರೀನಿವಾಸ್ ಅವರ ಸಮಯಪ್ರಜ್ಞೆಯಿಂದ ಅ ವ್ಯಕ್ತಿಯ ಜೀವ ಉಳಿದಿದೆ.
ಮಂಜುನಾಥ್ ಎಂಬುವವನು ನಿನ್ನೆ ರಾತ್ರಿ ತುಂಗಾನದಿಯ ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆ ವೇಳೆ ಸೇತುವೆ ಹತ್ತಿರವಿದ್ದ ಶ್ರೀನಿವಾಸ್ ಮಂಜುನಾಥ್ ಸೇತುವೆಯಿಂದ ಜಿಗಿಯುವುದು ನೋಡಿದ್ದಾರೆ ತಕ್ಷಣವೇ ಎಎಸ್ಐ ಅರ್ಜುನ್ ಮತ್ತು ಕಾಂತರಾಜ್ ಎಂಬ ಅಟೋ ಚಾಲಕರ ನೆರವಿನಿಂದ ಮಂಜುನಾಥನ ರಕ್ಷಣೆ ಮಾಡಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ತುಂಗಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ ಹಾಗೂ ಮಂಜುನಾಥ್ ಮೇಲಿಂದ ಬಿದ್ದ ರಭಸಕ್ಕೆ ಅತನ ಸೊಂಟ ಮತ್ತು ಕೈಕಾಲುಗಳಿಗೆ ಪೆಟ್ಟುಬಿದ್ದಿದೆ. ಯಾವುದೇ ಪ್ರಾಣಾಪಾಯವಾಗಿಲ್ಲ. ಮಂಜುನಾಥ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಎಸ್ಐ ಮಂಜುನಾಥ, ಆಟೋ ಚಾಲಕರಾದ ಕಾಂತರಾಜ್, ಮತ್ತು ಅರ್ಜುನ ರವರ ಸಮಯಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ
ಇದನ್ನು ಒದಿ : https://cnewstv.in/?p=7791
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv