Breaking News

ರಾಜ್ಯಾಧ್ಯಕ್ಷ ಗದ್ದುಗೆ ಏರುವ ಮೊದಲೇ ಸುದ್ದಿಯಾದ ನಲಪಾಡ್.

Cnewstv.in / 20.01.2022/ ಬೆಂಗಳೂರು/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ರಾಜ್ಯಾಧ್ಯಕ್ಷ ಗದ್ದುಗೆ ಏರುವ ಮೊದಲೇ ಸುದ್ದಿಯಾದ ನಲಪಾಡ್.

ಬೆಂಗಳೂರು : ಪ್ರದೇಶ ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ಇದೀಗ ಮತ್ತೊಮ್ಮೆ ರಾಜ್ಯಾದ್ಯಂತ ಸುದ್ದಿಯಾಗಿದ್ದಾರೆ.

ಪ್ರದೇಶ ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ಅವರು ಬಳ್ಳಾರಿಯ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳ್ಳಿಗೌಡ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷರಾದ ರಕ್ಷಾ ರಾಮಯ್ಯ ಅವರ ಅಧಿಕಾರ ಇದೇ ತಿಂಗಳ 30ರಂದು ಅಂತ್ಯವಾಗಲಿದೆ. ಕಾಂಗ್ರೆಸ್ ನಲ್ಲಿ ಆದ ಒಪ್ಪಂದದ ಪ್ರಕಾರ
ಅವರ ನಂತರ ಅಧ್ಯಕ್ಷ ಗದ್ದುಗೆಯನ್ನು ನಲಪಾಡ್ ಏರಲಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಯುವ ಕಾಂಗ್ರೆಸ್ ಜಿಲ್ಲಾ‌‌ ಅಧ್ಯಕ್ಷರ ಹಾಗೂ ಮುಖಂಡರ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಗೆ ಎಲ್ಲಾ ಜಿಲ್ಲೆಯ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಆಗಮಿಸಿದ್ದರು.‌ ಈ ಸಭೆಯಲ್ಲಿ ನಲಪಾಡ್ ಬಳ್ಳಾರಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪ್ರದೇಶ ಯುವ ಕಾಂಗ್ರೆಸ್ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ ಎಂಬ ವಿಚಾರ ಎಲ್ಲೆಡೆ ಹರಡುತ್ತಿದ್ದಂತೆ ನಲಪಾಡ್ ಹಾಗೂ ಸಿದ್ದು ಹಳ್ಳಿಗೌಡ ಇಬ್ಬರು ಪ್ರತಿಕ್ರಿಯೆ ನೀಡಿದ್ದು ಹೀಗೆ,

ನಿನ್ನೆ ಖಾಸಗಿ ಹೋಟೆಲಿನಲ್ಲಿ ಔತಣಕೂಟಕ್ಕೆ ಹೋಗಿದ್ದು ನಿಜ. ವಾಟ್ಸಪ್ ನಲ್ಲಿ ಹರಿದಾಡುತ್ತಿರುವ ಫೋಟೋ ನನ್ನದಲ್ಲ.‌ ನಲಪಾಡ್ ಹಾಗೂ ನನ್ನ ಮಧ್ಯೆ ಯಾವುದೇ ವೈರತ್ವವಿಲ್ಲ, ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ. – ಸಿದ್ದು ಹಳ್ಳಿಗೌಡ.

ನೆನ್ನೆ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು. ಸಭೆ ನಂತರ ನಾನು ಅಲ್ಲಿ ಇರಲಿಲ್ಲ ನನ್ನ ಕುಟುಂಬದ ಜೊತೆ ಇದೆ. ನಾನು ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸುತ್ತಿರುವ ಕಾರಣ ಯಾರೋ ನನ್ನ ತೇಜೋವಧೆ ಮಾಡಲು ಈ ರೀತಿ ಷಡ್ಯಂತ್ರ ಮಾಡುತ್ತಿದ್ದಾರೆ.- ನಲಪಾಡ್

ಈಗಾಗಲೇ ಸಾಕಷ್ಟು ವಿವಾದಗಳಲ್ಲಿ ನಲಪಾಡ್ ಅವರ ಹೆಸರು ಕೇಳಿಬಂದಿತ್ತು. ಇದೀಗ ಅಧಿಕಾರ ವಹಿಸಿಕೊಳ್ಳುವ ಮೊದಲು ನಲಪಾಡ್ ಅವರ ಹೆಸರು ಸುದ್ದಿಯಾಗಿದೆ

ಇದನ್ನು ಒದಿ : https://cnewstv.in/?p=7780

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*