Cnewstv.in / 19.01.2022/ ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಮಾರ್ಚ್ 22 ರಿಂದ ಸರಳ ಮಾರಿಕಾಂಬ ಜಾತ್ರೆ.
ಶಿವಮೊಗ್ಗ : ಕೋಟೆ ಶ್ರೀ ಮಾರಿಕಾಂಬ ಜಾತ್ರಾಮಹೋತ್ಸವವನ್ನು ಈ ಬಾರಿ ಸರಳವಾಗಿ ಮಾರ್ಚ್ 22ರಿಂದ ನಡೆಸಲು ಸಮಿತಿ ನಿರ್ಧರಿಸಿದೆ.
ಪ್ರತಿಬಾರಿಯಂತೆ ಈ ಬಾರಿಯೂ ಸಹ ಜಾತ್ರೆಯಲ್ಲಿ ಎಲ್ಲಾ ವಿಧಿವಿಧಾನಗಳು ನಡೆಯಲಿದೆ. ಹರಕೆ ಮಾಡುವುದು ಬೇವಿನ ಉಡುಗೆ ತೊಡುವುದು ಸೇರಿದಂತೆ ಎಲ್ಲಾ ಸಂಪ್ರದಾಯಗಳಿಗೆ ಅವಕಾಶವನ್ನು ಮಾಡಿಕೊಡಲಾಗುವುದು. ದೇವರ ದರ್ಶನಕ್ಕೆ ಅಂದಿನ ಪರಿಸ್ಥಿತಿಗನುಗುಣವಾಗಿ ಅವಕಾಶ ಮಾಡಿಕೊಡಲಾಗುವುದು.
ಮಾರ್ಚ್ 22ರಿಂದ ಜಾತ್ರೆ ಆರಂಭವಾಗಲಿದೆ. ಸರಳವಾಗಿ ಆಚರಿಸುವುದರಿಂದ ಈ ಬಾರಿ ಯಾವುದೇ ರೀತಿಯಾದಂತಹ ಅಂಗಡಿಗಳು ಎಕ್ಸಿಬಿಷನ್ ಗಳಿಗೆ ಅವಕಾಶವಿರುವುದಿಲ್ಲ. ಜಾತ್ರಾ ಮಹೋತ್ಸವದ ಬಗ್ಗೆ ಮತ್ತೊಂದು ಸಭೆ ನಡೆಸಲಾಗುವುದು. ನಂತರ ಜಾತ್ರಾ ಮಹೋತ್ಸವ 3 ಅಥವಾ 5 ದಿನಗಳು ನಡೆಯಲಿದೆ ಎಂಬುದು ನಿಗದಿಯಾಗಲಿದೆ.
ಸುದ್ದಿಗೋಷ್ಠಿಯಲ್ಲಿ ಕೋಟೆ ಮಾರಿಕಾಂಬಾ ಸೇವಾ ಸಮಿತಿ ಅಧ್ಯಕ್ಷರಾದ ಎಸ್.ಮರಿಯಪ್ಪ, ಪ್ರಧಾನ ಕಾರ್ಯದರ್ಶಿ ಎಸ್ ಮಂಜುನಾಥ್, ಮೇಯರ್ ಸುನಿತಾ ಅಣ್ಣಪ್ಪ ಹಾಗೂ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.
ಇದನ್ನು ಒದಿ : https://cnewstv.in/?p=7729
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv