Cnewstv.in / 19.01.2022/ ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಗೆ ಚಾಲನೆ ನೀಡಿದ ಸಂಸದ ಬಿ. ವೈ. ರಾಘವೇಂದ್ರ
ಶಿವಮೊಗ್ಗ : ಜಿಲ್ಲೆಯ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಕುಂಚೇನಹಳ್ಳಿ ಗ್ರಾಮದಲ್ಲಿ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಗೆ ಚಾಲನೆಯನ್ನು ಸಂಸದರಾದ ಬಿ. ವೈ. ರಾಘವೇಂದ್ರ ಅವರು ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಅಶೋಕ್ ನಾಯ್ಕ್ ಚಾಲನೆ ನೀಡಿದರು ಹಾಗೂ ಮೇಲಿನ ಕುಂಚೇನಹಳ್ಳಿ ಮತ್ತು ಕೆಳಗಿನ ಕುಂಚೇನಹಳ್ಳಿಯಲ್ಲಿ ರಸ್ತೆಗೆ ವಿದ್ಯುತ್ ಬೀದಿ ದೀಪ ( ಸೋಲಾರ್ ಹೈ ಮಾಸ್ಕ್ ) ಮತ್ತು ಬಾಕ್ಸ್ ಚರಂಡಿ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿಯನ್ನು ಉದ್ಘಾಟಿಸಿದರು.
ಸ್ವಾತಂತ್ರ್ಯ ಬಂದು 75 ವರ್ಷ ಕಳೆದರು ಈ ಸಮಾಜದ ಅಭಿವೃದ್ಧಿಗಾಗಿ ಯಾರು ಯೋಚನೆಯನ್ನು ಮಾಡದ ಸಮಯದಲ್ಲಿ ಜನ ನಾಯಕ ಬಿ. ಎಸ್ ಯಡಿಯೂರಪ್ಪನವರು ಬಣಜಾರ ಸಮುದಾಯಕ್ಕಾಗಿ ತಾಂಡಾ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಅನೇಕ ಜನಪರ ಕೆಲಸಕ್ಕೆ ನಾಂದಿ ಹಾಡಿದ್ದಾರೆ, ಜೊತೆಗೆ ಈ ಪ್ರದೇಶದ ಜನರು ಕೃಷಿ ಮತ್ತು ಕೂಲಿ ಕೆಲಸವನ್ನು ನಂಬಿಕೊಂಡು ಜೀವನವನ್ನು ನೆಡೆಸುತ್ತಿದೆ, ನಾವು ಯಾವುದೇ ಕಾರಣಕ್ಕೂ ಇಲ್ಲಿನ ಜನರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಸಂತ ಸೇವಾಲಾಲ್ ಜನ್ಮ ಸ್ಥಳ ಅಭಿವೃದ್ಧಿ, ಶಿವಮೊಗ್ಗದಲ್ಲಿ ಬಣಜಾರ್ ಸಮುದಾಯಕ್ಕೆ ಬೃಹತ್ ಸಮುದಾಯ ಭವನ, 29 ಕೋಟಿ ವೆಚ್ಚದಲ್ಲಿ ಹೊಳೆಹಣಸವಾಡಿ ಏತ ನೀರಾವರಿ ಯೋಜನೆಗಳು ಹೀಗೆ ಅನೇಕ ಜನಪರ ಕೆಲಸವನ್ನು ಮಾಡಿದ್ದೇವೆ ಇಂದು ಪ್ರಧಾನಿ ನರೇಂದ್ರ ಮೋದಿಯವರ ಕನಸು ಪ್ರಧಾನ ಮಂತ್ರಿ ಆದರ್ಶ ಗ್ರಾಮದ ಯೋಜನೆ ಇಲ್ಲಿ ಪ್ರಾರಂಭವಾಗುತ್ತಿದೆ ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆಯುವ ಜೊತೆಗೆ ಈ ಆಸ್ತಿಗಳನ್ನು ಉಳಿಸಿಕೊಳ್ಳಬೇಕು ಎಂದರು.
ಪ್ರಧಾನ ಮಂತ್ರಿ ಆದರ್ಶ ಗ್ರಾಮ :
• ಒಂದು ಗ್ರಾಮದ ಒಟ್ಟು ಜನಸಂಖ್ಯೆಯಲ್ಲಿ ಶೇ.50ಕ್ಕಿಂತ ಹೆಚ್ಚು ಪರಿಶಿಷ್ಟ ಜಾತಿ ಜನಸಂಖ್ಯೆ ಇರುವ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಸಮಗ್ರವಾಗಿ ಅಭಿವೃದ್ಧಿಪಡಿಸುವುದು.
• ಪ್ರತಿ ಗ್ರಾಮದಲ್ಲಿ ಅಂದಾಜು ರೂ. 40.00 ಲಕ್ಷಗಳಲ್ಲಿ ಕುಡಿಯುವ ನೀರು, ನೈರ್ಮಲ್ಯ, ಶಿಕ್ಷಣ, ಆರೋಗ್ಯ ಮತ್ತು ಅಪೌಷ್ಠಿಕತೆ, ಸಾಮಾಜಿಕ ಭದ್ರತೆ, ಗ್ರಾಮೀಣ ರಸ್ತೆ ಮತ್ತು ವಸತಿ ಸೌಲಭ್ಯ, ವಿದ್ಯುಧೀಕರಣ ಮತ್ತು ಸ್ವಚ್ಛ ಇಂಧನ, ಕೃಷಿ ಕೌಶಲ್ಯಾಭಿವೃದ್ಧಿ ಪಡಿಸುವುದು ಇತ್ಯಾದಿ ಕಾಮಗಾರಿಗಳಿಗಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಜೀವನ & ಚಟುವಟಿಕೆಗಳು, ಆರ್ಥಿಕ ಸುಭದ್ರತೆ, ಡಿಜಿಟಲೀಕರಣ ಕೆಲಸವು ನೆಡೆಯಲಿದೆ.

1. 2018-19ನೇ ಸಾಲಿನಲ್ಲಿ 10 ಗ್ರಾಮಗಳು,
2. 2019-20ನೇ ಸಾಲಿನಲ್ಲಿ 27 ಗ್ರಾಮಗಳು 3. 2020-21ನೇ ಸಾಲಿನಲ್ಲಿ 33 ಗ್ರಾಮಗಳು ಆಯ್ಕೆಯಾಗಿದೆ.
ಒಟ್ಟಾರೆ ಶಿವಮೊಗ್ಗ ಜಿಲ್ಲೆಯ 70 ಗ್ರಾಮಗಳನ್ನು ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಡಿ.ಸಿ.ಸಿ ಅಧಕ್ಷರಾದ ಚೆನ್ನವೀರಪ್ಪ ನವರು, ಶಿಮುಲ್ ಅಧ್ಯಕ್ಷರಾದ ಶ್ರೀಪಾದ್ ಹೆಗಡೆ,
ಶಿಮುಲ್ ನಿರ್ದೇಶಕರಾದ ದಿನೇಶ್ ರವರು, ರೈಲ್ವೆ ಸಲಾಹ ಸಮಿತಿ ಸದಸ್ಯರಾದ ಮೋಹನ್ ರವರು, ಮುಖಂಡರುಗಳಾದ ಭೋಜ್ಯಾನಾಯ್ಕ, ಷಣ್ಮುಖಪ್ಪ, ರವರುಗಳು ಹಾಗೂ ಪಕ್ಷದ ಪ್ರಮುಖರು,ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಇದನ್ನು ಒದಿ : https://cnewstv.in/?p=7726
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv