Cnewstv.in / 18.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿ ಇರುವ ಸ್ತಬ್ಧಚಿತ್ರದ ಮೆರವಣಿಗೆ ಗೆ ಅವಕಾಶ ಮಾಡಿ ಕೊಡಿ.
ಶಿವಮೊಗ್ಗ : ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿ ಇರುವ ಸ್ತಬ್ಧಚಿತ್ರ ವನ್ನು ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಮೆರವಣಿಗೆ ಗೆ ಅವಕಾಶ ಮಾಡಿಕೊಂಡಿ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ, ಹಿಂದುಳಿದ ವರ್ಗಗಳ ವಿಭಾಗದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
26 ನೇ ಜನವರಿ 2022 ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ಕಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿ ಇರುವ ಸ್ತಬ್ಧಚಿತ್ರದ ಮೆರವಣಿಗೆಯ ಅವಕಾಶವನ್ನು ನೀಡಲು ಕೇಂದ್ರ ರಕ್ಷಣಾ ಸಚಿವಾಲಯದಿಂದ ರಚನೆಯಾಗಿರುವ ಅಯ್ಕೆ ಸಮಿತಿಯು ನಿರಾಕರಿಸಿರುವುದು ಗುರುಗಳಿಗೆ ಅಗೌರವ ತೋರಿಸು ವುದರೊಂದಿಗೆ ಅವಮಾನ ಮಾಡುವ ಕೆಲಸ ಮಾಡುತ್ತಿದೆ. ಮತ್ತು ಹಿಂದುಳಿದ ವರ್ಗಗಳ ಜನರ ಭಾವನೆಗೆ ಧಕ್ಕೆ ತರುವಂತಹ ಸಂಗತಿಯೂ ಆಗಿದೆ.
ಮಾನವತಾವಾದಿಗಳು, ದಾರ್ಶನಿಕರು, ಸಮಾಜಮುಖಿಗಳು, ಶೋಷಣೆಗೆ ಒಳಗಾದ ಹಿಂದುಳಿದ ವರ್ಗಗಳ ಸಮಾಜದ
ವರನ್ನು ಮೇಲಕ್ಕೆತ್ತಿ ಅವರ ಜೀವನದಲ್ಲಿ ಆಶಾಕಿರಣ ಮೂಡಿಸಿದ ಹಾಗೂ ಅಕ್ಷರ ಬ್ರಹ್ಮ ಎಂದು ಹೆಸರಾಗಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿ ಇರುವ ಸ್ತಬ್ಧಚಿತ್ರದ ಮೆರವಣಿಗೆಗೆ ಈ ಬಾರಿ ಯ 2022 ಇಸವಿಯ ಜನವರಿ 26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಸಂಭ್ರಮಾಚರಣೆಯ ಮೆರವಣಿಗೆಯಲ್ಲಿ ಅವಕಾಶ ಮಾಡಿಕೊಡುವ ಮೂಲಕ ಗುರುಗಳಿಗೆ ಗೌರವ ನೀಡಲು ಪ್ರಧಾನ ಮಂತ್ರಿಗಳಿಗೆ ಮತ್ತು ಆಯ್ಕೆ ಸಮಿತಿಗೆ ಕೂಡಲೇ ಆದೇಶಿಸುವ ಮೂಲಕ ಈ ದೇಶದ ಹಿಂದುಳಿದ ವರ್ಗಕ್ಕೆ ಸೇರಿದ ಜನರು ಸಂತರಾದ ಬ್ರಹ್ಮ ಶ್ರೀ ನಾರಾಯಣ ಗುರುಗಳ ಮೇಲೆ ಇಟ್ಟಿರುವ ಗೌರವ ಮತ್ತು ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ನಡೆದು ಕೊಳ್ಳಲು ಸೂಚಿಸ ಬೇಕೆಂದು ವಿನಂತಿಸಿದರು.
ಇದನ್ನು ಒದಿ : https://cnewstv.in/?p=7684
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv