Breaking News

ಗ್ರಾಮ ದೇವತೆ ಶ್ರೀ ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿದ ಸಂಸದರಾದ ಬಿ. ವೈ ರಾಘವೇಂದ್ರ

Cnewstv.in / 18.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಗ್ರಾಮ ದೇವತೆ ಶ್ರೀ ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿದ ಸಂಸದರಾದ ಬಿ. ವೈ ರಾಘವೇಂದ್ರ

ಶಿಕಾರಿಪುರ : ಊರಿನ ಗ್ರಾಮ ದೇವತೆ ಶೀ ಮಾರಿಕಾಂಬಾ ದೇವಿಯ ಸಂಪ್ರದಾಯಿಕ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಸಂಸದರಾದ ಬಿ. ವೈ ರಾಘವೇಂದ್ರ ಅವರು ಕುಟುಂಬ ಸಮೇತವಾಗಿ ಆಗಮಿಸಿ ತಾಯಿಗೆ ಪೂಜೆಯನ್ನು ಸಲ್ಲಿಸಿದರು.

ನಂತರ ಮಾತನಾಡಿದ ಸಂಸದರು, “ಈ ಪ್ರಪಂಚಕ್ಕೆ ಬಂದಿರುವ ಕರೋನಾ ರೋಗವು ಬೇಗ ನಿವಾರಣೆಯಾಗಿ ತಾಯಿ ಮಾರಿಕಾಂಬೆಯು ಎಲ್ಲರಿಗೂ ಆಯುರ್ ಆರೋಗ್ಯವನ್ನು ಕರುಣಿಸಿ, ಸಮೃದ್ಧ ಮಳೆ-ಬೆಳೆ ಆಗಲಿ ಹಾಗೂ ಕಾರ್ಯಕ್ರಮವು ಯಶಸ್ವಿಯಾಗಿ ನೆಡೆಯಲಿ ಎಂದು ತಾಯಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು” ಎಂದರು. ‌

ಈ ಸಂಧರ್ಭದಲ್ಲಿ ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಗುರುಮೂರ್ತಿಯವರು, ಭದ್ರಾಪುರ ಹಾಲಪ್ಪ, ಸುಕೇಂದ್ರಪ್ಪ,‌ ಕಬ್ಬಡ್ಡಿ ರಾಜಣ್ಣ. ಪುರಸಭಾ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮಿ ಮಹಲಿಂಗಪ್ಪ ಮತ್ತು ಸದಸ್ಯರು, ಜಾತ್ರಾ ಸಮಿತಿಯ ಅಧ್ಯಕ್ಷರಾದ ಮಹೇಶ್ ದೇವಸ್ಥಾನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು

ಇದನ್ನು ಒದಿ : https://cnewstv.in/?p=7684

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*