Cnewstv.in / 18.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ರಿಯಲ್ ಎಸ್ಟೇಟ್ ವ್ಯವಹಾರ : ಗೌಸಿಯಾ ಹೊಟೇಲ್ ನಲ್ಲಿ ಯುವಕರ ನಡುವೆ ಮಾರಾಮಾರಿ.
ಶಿವಮೊಗ್ಗ : ರಿಯಲ್ ಎಸ್ಟೇಟ್ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಯುವಕರ ನಡುವೆ ಮಾರಾಮಾರಿ ನಡೆದ ಘಟನೆ ನಡೆದಿದೆ.
ಬೈಪಾಸ್ ರಸ್ತೆಯ ಗೌಸಿಯಾ ಹೋಟೆಲ್ ನಲ್ಲಿ ಈ ಘಟನೆ ನಡೆದಿದೆ. ಗೌಸಿಯಾ ಹೋಟೆಲ್ ಶಿವಮೊಗ್ಗದ ಜನರು ಮರೆಯಲು ಸಾಧ್ಯವಿಲ್ಲ. ಇದೇ ರಿಯಲ್ ಎಸ್ಟೇಟ್ ವಿಚಾರಕ್ಕೆ ಸಂಬಂಧಿಸಿದಂತೆ ಬುಡುಬುಡುಕಿ ಸಾಧಿಕ್ ಮರ್ಡರ್ ಆಗಿತ್ತು. ಮರ್ಡರ್ ಪ್ರಕರಣದ ಆರೋಪಿಯಾಗಿ ಜೈಲಿನಲ್ಲಿರುವ ಮನ್ಸೂರೇ ಈ ಗೌಸಿಯಾ ಹೋಟೆಲ್ ಮಾಲೀಕ.
ನಿನ್ನೆ ರಾತ್ರಿ ಗೌಸಿಯಾ ಹೋಟೆಲ್ ಮತ್ತೊಮ್ಮೆ ಈ ಎಲ್ಲಾ ಘಟನೆಗಳನ್ನು ನೆನಪಿಸಿದೆ. ಮಾಜಿಕಾರ್ಪರೇಟರ್ ರೆಹಮಾನ್ ಅವರ ಮಗ ಶಫಿ ಜಮೀನಿನ ಖರೀದಿ ವಿಚಾರದಲ್ಲಿ ಜುನೈದ್ ಬಳಿ ಬಂದು ಹಣ ಕೇಳ್ತಾನೆ. ಮನ್ಸೂರ್ ನ ಸಹೋದರ ಸೈಫುಲ್ಲಾ ಈ ಜುನೈದ್ ನ ಸಂಬಂಧಿಕ ಕೂಡ, ಯಾವಾಗ ಜುನೈದ್ ಹಣದ ವಿಚಾರ ನನ್ನ ಬಳಿ ಹೇಳಬೇಡ ಯಾರಿಗೆ ನೀನು ವ್ಯವಹಾರ ಮಾಡಿಕೊಂಡಿದ್ಯೋ ಅವರನ್ನ ಕೇಳು ಎಂದು ಹೇಳುತ್ತಾನೆ. ಅದಕ್ಕೆ ಕೋಪಕೊಂಡ ಶಫಿ ಕೂಗಾಡುತ್ತಾನೆ. ಜುನೈದ್ ಮೇಲೆ ಹಲ್ಲೆ ನಡೆಸುತ್ತಾನೆ.
ಹೊರಗಡೆ ಹೋಗಿ ಸಿದ್ಧಿಕಿಯನ್ನ ಕರೆದುಕೊಂಡು ಬರುತ್ತಾನೆ. ಸಿದ್ದಕಿ, ಶಫಿ ಹಾಗೂ ಜುನೈದ್ ಮತ್ತು ಸೈಫುಲ್ಲಾ ನಡುವೆ ಗ್ಯಾಂಗ್ ವಾರ್ ಟೈಪು ಮಾರಾಮಾರಿ ನಡೆಯುತ್ತೆ. ಈ ವೇಳೆ ಸ್ಥಳಕ್ಕೆ ಬಂದ ದೊಡ್ಡಪೇಟೆ ಪೊಲೀಸರು ಮಧ್ಯಪ್ರವೇಶದಿಂದ ಜಗಳ ತಣ್ಣಗಾಗುತ್ತೆ. ಜುನೈದ್ ಈ ವಿಚಾರದಲ್ಲಿ ಶಫಿ ವಿರುದ್ಧ ದೂರು ನೀಡುತ್ತಾನೆ. ಶಫಿಗೆ ದೊಡ್ಡಪೇಟೆ ಪೊಲೀಸರು ಶರಣಾಗಲು ಸೂಚಿಸಿದ್ದಾರೆ.
ಇದನ್ನು ಒದಿ : https://cnewstv.in/?p=7678
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv