Breaking News

ಗ್ರಾಮಾಂತರ ಭಾಗದಲ್ಲಿ ನಾಳೆ ವಿದ್ಯುತ್ ವ್ಯತ್ಯಯ

Cnewstv.in / 15.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಗ್ರಾಮಾಂತರ ಭಾಗದಲ್ಲಿ ನಾಳೆ ವಿದ್ಯುತ್ ವ್ಯತ್ಯಯ

ಶಿವಮೊಗ್ಗ : ಗ್ರಾಮಾಂತರ ಭಾಗದಲ್ಲಿ ನಾಳೆ ವಿದ್ಯುತ್ ವ್ಯತ್ಯಯವಾಗಲಿದೆ.

ಕುಂಸಿ ಗ್ರಾಮ ವ್ಯಾಪ್ತಿಗೆ ಬರುವ ರೈಲ್ವೆ ಕ್ರಾಸಿಂಗ್ ಹತ್ತಿರ ನಿರಂತರ ಜ್ಯೋತಿ ಯುಜಿ ಕೇಬಲ್ ಅಳವಡಿಸುವ ಕಾಮಗಾರಿ ಹಾಗೂ 11ಕೆವಿ ಬೆನವಳ್ಳಿ ಮತ್ತು ಆಯನೂರು ನಿರಂತರ ಜ್ಯೋತಿ ಕಾಮಗಾರಿಯನ್ನು ಹಮ್ಮಿಕೊಳ್ಳುವುದರಿಂದ ಎಫ್-2 ಕುಂಸಿ, ಎಫ್-9 ಆಯನೂರು ಹಾಗೂ ಎಫ್-15.

ಸಿರಿಗೆರೆ, ಎಫ್-10 ಹಾರ್ನಳ್ಳಿ ಮಾರ್ಗಗಳಿಂದ ಸರಬರಾಜಾಗುವ ಹಳ್ಳಿಗಳಾದ ಹುಬ್ಬನಹಳ್ಳಿ, ಹಾರ್ನಳ್ಳಿ, ಚಾಮೇನಹಳ್ಳಿ, ವೀರಣ್ಣನಬೆನವಳ್ಳಿ, ಸೇವಾಲಾಲ್ ನಗರ, ಆಯನೂರು, ಮಂಡಘಟ್ಟ, ಸಿರಿಗೆರೆ, ಸೂಡೂರು, ಕೂಡಿ, ದೊಡ್ಡಮತ್ತಲಿ, ತಮ್ಮಡಿಹಳ್ಳಿ, ಮಂಜರಿಕೊಪ್ಪ, ದೊಡ್ಡದಾನಂದಿ, ಬಿಲ್ಗುಣಿ, ಕಲ್ಲುಕೊಪ್ಪ, ಚಿಕ್ಕಮತ್ಲಿ, ದ್ಯಾವಿನಕೆರೆ, ಕೂಡಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ದಿ : 16/01/2022 ರಂದು ಬೆಳಿಗ್ಗೆ 10 ರಿಂದ ಸಂಜೆ 6.00 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹರಿಸಬೇಕೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಇದನ್ನು ಒದಿ : https://cnewstv.in/?p=7616

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*