Cnewstv.in / 15.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ವೀಕೆಂಡ್ ಕರ್ಫ್ಯೂ ಜನಸಂಚಾರ ವಿರಳ
ಶಿವಮೊಗ್ಗ : ಜಿಲ್ಲೆಯಲ್ಲಿ ಇಂದು ಎರಡನೇ ವಾರದ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ಮೊದಲನೇ ವಾರದ ವೀಕೆಂಡ್ ಕರ್ಫ್ಯೂ ಗೆ ಹೋಲಿಸಿದರೆ ಈ ಬಾರಿ ಜನಸಂಚಾರ ಬಹಳಷ್ಟು ವಿರಳವಾಗಿದೆ.
ಜಿಲ್ಲೆಯಲ್ಲಿ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿದ್ದರೂ ಸಹ ಜನರ ಓಡಾಟ ಕಡಿಮೆ ಇದೆ. ಕೆಲವರು ನೆನ್ನೆನೆ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದು, ಇನ್ನು ಕೆಲವರು ಇಂದು ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಹಬ್ಬಕ್ಕೆ ಬೇಕಾದ ವಸ್ತುಗಳನ್ನೆಲ್ಲಾ ನಿನ್ನೆಯೆ ಖರೀದಿ ಮಾಡಿದ್ದು, ಮಾರುಕಟ್ಟೆಯಲ್ಲಿಯೂ ಸಹ ಜನ ಸಂಖ್ಯೆ ವಿರಳವಾಗಿದೆ.
ಇನ್ನೂ ಕಳೆದ ವರ್ಷ ಕರ್ಫ್ಯೂ ಸಂದರ್ಭದಲ್ಲಿ ಜನರು ಹಬ್ಬದ ಖರೀದಿಗಾಗಿ ಮುಗಿಬಿದ್ದಿದ್ದರು. ಆದರೆ ಈ ಬಾರಿ ಜನರು ಸ್ವಯಂಪ್ರೇರಿತರಾಗಿ ಎಚ್ಚೆತ್ತುಕೊಂಡಿದ್ದಾರೆ. ನಗರದ ಪ್ರಮುಖ ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದೆ.
ಸದಾ ಜನರ ದಟ್ಟನೆ ಹಾಗೂ ವಾಹನ ಸಂಚಾರ ಗಳಿಂದ ಕೂಡಿರುತಿದ್ದ ರಸ್ತೆಗಳು ಇಂದು ಖಾಲಿ ಖಾಲಿಯಾಗಿದೆ. ಒಟ್ಟಿನಲ್ಲಿ ಎರಡನೇ ವಾರದ ವೀಕೆಂಡ್ ಕರ್ಫ್ಯೂಗೆ ಬೆಳಿಗ್ಗೆಯಿಂದಲೇ ರಸ್ತೆಗಳು ಖಾಲಿಯಾಗಿದೆ.
ಕೆ ಎಸ್ ಆರ್ ಟಿ ಸಿ ಹಾಗೂ ಖಾಸಗಿ ಬಸ್ ಗಳ ಸಂಚಾರ ವಿದ್ದರೂ ಸಹ ಪ್ರಯಾಣಿಕರ ಇಲ್ಲದಂತಾಗಿದೆ. ಅನವಶ್ಯಕವಾಗಿ ಜನರ ಓಡಾಟ ಬಂದ್ ಅಗಿದೆ. ನಗರದ ಪ್ರಮುಖ ವೃತ್ತಗಳಲ್ಲಿ ಹಾಗೂ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದು ಅನಗತ್ಯವಾಗಿ ಓಡಾಡುವವರು ವಿರುದ್ಧ ಕೇಸ್ ದಾಖಲಿಸುತ್ತಿದ್ದಾರೆ.
ಇದನ್ನು ಒದಿ : https://cnewstv.in/?p=7599
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv