Breaking News

ಸಿಕ್ಕ ಚಿನ್ನದ ಉಂಗುರವನ್ನು, ಪ್ರಾಮಾಣಿಕವಾಗಿ ಹಿಂತಿರುಗಿಸಿದ ಚಿನ್ನದ ಹುಡುಗ.‌

Cnewstv.in / 14.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಸಿಕ್ಕ ಚಿನ್ನದ ಉಂಗುರವನ್ನು, ಪ್ರಾಮಾಣಿಕವಾಗಿ ಹಿಂತಿರುಗಿಸಿದ ಚಿನ್ನದ ಹುಡುಗ.‌

ಶಿವಮೊಗ್ಗ : ಕದ್ದ ವಸ್ತುಗಳನ್ನೇ ಹಿಂದಿರುಗಿಸಲು ಯೋಚಿಸುವ ಸಮಯದಲ್ಲಿ, ತನಗೆ ಸಿಕ್ಕ ವಸ್ತುವನ್ನು ಹಿಂತಿರುಗಿಸಿ ಬಾಲಕನು ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.‌

ಹೌದು ಈ ಘಟನೆ ನಡೆದಿರುವುದು ಶಿವಮೊಗ್ಗದ ತುಂಗಾ ಪ್ರೌಢಶಾಲೆಯಲ್ಲಿ. ಫಯಾಜ್ ಎಂಬ 9 ನೇ ತರಗತಿಯ ಹುಡುಗ ಶಾಲಾ ಆವರಣದಲ್ಲಿ ಆಟವಾಡುತ್ತಿದ್ದಾಗ ಚಿನ್ನದ ಉಂಗುರವೊಂದು ದೊರೆತಿದೆ. ಕೂಡಲೇ ಅದನ್ನು ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಅವರಿಗೆ ತಲುಪಿಸಿದ್ದಾರೆ.

ಶಾಲೆಯ ಮುಖ್ಯ ಶಿಕ್ಷಕರಾದ ಸತ್ಯ ನಾರಾಯಣ್ ರವರು ತಮ್ಮ ಉಂಗುರವನ್ನು ಕಳೆದುಕೊಂಡು ಹುಡುಕುತ್ತಿದ್ದರು. ಅದೇ ಸಮಯದಲ್ಲಿ ಫಯಾಜ್ ತನಗೆ ಸಿಕ್ಕ ಚಿನ್ನದ ಉಂಗುರವನ್ನು ಪ್ರಾಮಾಣಿಕವಾಗಿ ತಂದುಕೊಟ್ಟಿದ್ದಾರೆ.

ಇದನ್ನು ಒದಿ : https://cnewstv.in/?p=7580

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*