Cnewstv.in / 14.01.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಕುಡಿದ ಅಮಲಿನಲ್ಲಿ ಪ್ರೇಯಸಿಯನ್ನು ಕೊಂದು, ಶವದ ಜೊತೆ ಇಡೀ ರಾತ್ರಿ ಕಳೆದ ಪ್ರಿಯಕರ
ಬೆಂಗಳೂರು : ಪ್ರೇಯಸಿಯನ್ನು ಕುಡಿದ ಅಮಲಿನಲ್ಲಿ ಕೊಂದ ಪ್ರಿಯಕರ ಆ ಶವದ ಜೊತೆ ಇಡೀ ರಾತ್ರಿ ಕಳೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಂಜುನಾಥ್ ಎಂಬ ಆರೋಪಿಯು ತನ್ನ ಪ್ರೇಯಸಿ ಮಂಜುಳಾಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ, ನಂತರ ಆಸ್ಪತ್ರೆಗೆ ದಾಖಲಿಸಿ ಸುಳ್ಳು ವಿಳಾಸ ನೀಡಿ, ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಮೂಲದ ಮಂಜುನಾಥ್ (40) ಎಂಬ ಆರೋಪಿಯು 7 ವರ್ಷಗಳ ಹಿಂದೆ ನಗರಕ್ಕೆ ಆಗಮಿಸಿದ್ದರು. ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದ ಇತನು ಕೋಣನಕುಂಟೆಯ ಬೀರೇಶ್ವರ ನಗರದಲ್ಲಿ ವಾಸವಾಗಿದನು ಹಾಗೂ ಸಾಕಷ್ಟು ಹೆಣ್ಣುಮಕ್ಕಳ ಜೊತೆ ಸಂಬಂಧವನ್ನು ಹೊಂದಿದನು.
ವೇಶ್ಯಾವಾಟಿಕೆ ನಡೆಸುವ ಒಬ್ಬರಿಂದ ಮಂಜುಳಾ ಎಂಬವರ ಜೊತೆಯಲ್ಲಿ ಮಂಜುನಾಥನಿಗೆ ಪರಿಚಯವಾಯಿತು. ಮಂಜುಳಾ ಪತಿಯಿಂದ ದೂರವಾಗಿ ಮಡಿವಾಳದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದಳು.ಈಕೆ ಮನೆ ಕೆಲಸ ಮಾಡುತ್ತಿದ್ದಳು. ನಂತರ ಮಂಜುಳಾ ಮತ್ತು ಮಂಜುನಾಥ್ ಒಟ್ಟಿಗೆ ಒಂದೇ ಮನೆಯಲ್ಲಿ ವಾಸವಿದ್ದರು.
ಮಂಜುಳಾಗೆ ಕುಡಿವ ಅಭ್ಯಾಸವಿದ್ದು ಜನವರಿ 6 ರಂದು ಮಂಜುನಾಥ ಕುಡಿಯಲು ತರುವುದಕ್ಕಾಗಿ ಹೇಳಿದಳು. ಮಂಜುನಾಥ ಒಂದು ಬಾಟಲಿಯನ್ನು ಮಾತ್ರ ತಂದಿದ್ದನು ಮತ್ತೊಂದು ಬಾಟಲಿಯನ್ನು ತರುವಂತೆ ಹೇಳಿದಾಗ ಅವನು ನಿರಾಕರಿಸಿದ್ದಾನೆ. ಈ ಮಧ್ಯ ಅವರಿಬ್ಬರಿಗೆ ಮಧ್ಯೆ ಜಗಳವಾಗಿದೆ ಅಲ್ಲದೆ ಮಂಜುನಾಥ್ ನಿಗೆ ಮಂಜುಳಾ ಗೆ ಬೇರೆ ಯಾರದೋ ಜೊತೆಗೆ ಅನೈತಿಕ ಸಂಬಂಧವನ್ನು ಹೊಂದಿದ್ದಾರೆ ಎಂಬ ಸಂಶಯ ಕೂಡ ಬಂದಿದೆ.
ಅವರಿಬ್ಬರ ನಡುವೆ ಜಗಳ ಅತಿರೇಕಕ್ಕೆ ಹೋಗಿ ಮಂಜುನಾಥ್ ಬಾರ್ ಬೆಂಡಿಂಗ್ ಸುತ್ತಿಗೆಯಿಂದ ಮಂಜುಳಾ ತಲೆಗೆ ಹಾಗೂ ತೊಡೆಗೆ ಜೋರಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಮಂಜುಳಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಮಂಜುಳಾ ಸತ್ತಿರುವುದು ಖಚಿತಪಡಿಸಿಕೊಂಡ ಮಂಜುನಾಥ ರಾತ್ರಿ ಮೃತದೇಹಕ್ಕೆ ಸ್ನಾನಮಾಡಿಸಿ ಅವಳ ಬಟ್ಟೆಗಳನ್ನು ಬದಲಾಯಿಸಿ, ರಾತ್ರಿ ಶವದ ಜೊತೆಯಲ್ಲೆ ಕಾಲ ಕಳೆಯುತ್ತಾನೆ. ಬೆಳಿಗ್ಗೆ ಮಂಜುಳಾ ಪ್ರಜ್ಞೆತಪ್ಪಿ ಬಿದ್ದಿದ್ದಾರೆ ಎಂದು ನಂಬಿಸಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸುತ್ತಾರೆ.
ಆಸ್ಪತ್ರೆಗೆ ದಾಖಲಿಸಿದ ಮಂಜುನಾಥ್ ಸುಳ್ಳು ವಿಳಾಸಗಳನ್ನು ನೀಡುತ್ತಾನೆ. ನಂತರ ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಮಂಜುನಾಥ್ ಮೇಲೆ ಈ ಹಿಂದೆ ಕೊಲೆ ಪ್ರಯತ್ನದ ಆರೋಪವಿದ್ದು ಒಂದು ತಿಂಗಳು ಜೈಲಿಗೂ ಹೋಗಿ ಬಂದಿದ್ದ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ.
ಇದನ್ನು ಒದಿ : https://cnewstv.in/?p=7572
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv