Breaking News

ಮಾದಕ ವಸ್ತುಗಳನ್ನು ಸೇವಿಸಿ ಜನರಿಗೆ ತೊಂದರೆ ಕೊಡುತ್ತಿದ್ದವರು ವಿರುದ್ದ, ಪ್ರಕರಣ ದಾಖಲು.

Cnewstv.in / 14.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಮಾದಕ ವಸ್ತುಗಳನ್ನು ಸೇವಿಸಿ ಜನರಿಗೆ ತೊಂದರೆ ಕೊಡುತ್ತಿದ್ದವರು ವಿರುದ್ದ, ಪ್ರಕರಣ ದಾಖಲು.

ಶಿವಮೊಗ್ಗ : ಮಾದಕ ವಸ್ತುವನ್ನು ಸೇವಿಸಿ, ಜನರಿಗೆ ತೊಂದರೆ ಕೊಡುತ್ತಿದ್ದವರನ್ನು ತುಂಗಾ ನಗರ ಪೊಲೀಸರು ಬಂಧಿಸಿದ್ದಾರೆ.

ತುಂಬಾ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಸಂದೀಪ್, ಕಾಂತರಾಜ್,‌ಕಿರಣ್ ಮೊರೆಯವರು, ಸಂಜೆ 7 ಗಂಟೆಗೆ, ಮೇಲಿನ ತುಂಗಾನಗರದ ಶನೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಮೂವರು ಆರೋಪಿಗಳನ್ನು ಅನುಮಾನಾಸ್ಪದವಾಗಿ ಓಡಾಡುವುದನ್ನು ಗಮನಿಸಿದ್ದಾರೆ.

ಅಲ್ಲದೆ ಅ ಮೂರು ಜನ ಆರೋಪಿತರು ಮಾದಕ ವಸ್ತುಗಳ ಸೇವನೆ ಮಾಡಿರುವ ಅಮಲಿನಲ್ಲಿ ಸಾರ್ವಜನಿಕರಿಗೆ ತೊಂದರೆಯನ್ನು ನೀಡುತ್ತಿದ್ದರು.‌ ಅನುಮಾನದ ಮೇರೆಗೆ ಅವರನ್ನು ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಪರಿಶೀಲಿಸಿದಾಗ ಮಾದಕವಸ್ತು ಸೇವನೆ ಮಾಡಿರುವುದು ದೃಡಪಟ್ಟಿದೆ.

ರಾತ್ರಿ 8.45 ರ ಸಮಯಕ್ಕೆ ಠಾಣೆಗೆ ಆ ಮೂರು ಜನರನ್ನು ವಾಪಸ್ ಕರೆತಂದು ಅವರ ವಿರುದ್ಧ 27 (b) ndps ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನು ಒದಿ : https://cnewstv.in/?p=7561

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*