Breaking News

ನಮ್ಮ ಮಾತು ಕೇಳಿದ್ರೇ‌, ಯಾರಿಗೂ ಕೋವಿಡ್ ಬರುತ್ತಿರಲಿಲ್ಲ

Cnewstv.in / 13.01.2022 / ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ನಮ್ಮ ಮಾತು ಕೇಳಿದ್ರೇ‌, ಯಾರಿಗೂ ಕೋವಿಡ್ ಬರುತ್ತಿರಲಿಲ್ಲ

ಶಿವಮೊಗ್ಗ : ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕಳೆದ 4 ದಿನಗಳಿಂದ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ ಪಾದಯಾತ್ರೆಗೆ ಇಂದು ಬ್ರೇಕ್ ಬಿದ್ದಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ನವರು, ನಮ್ಮ ಮಾತು ಕೇಳಿದ್ರೇ‌..ಖರ್ಗೆ, ಮೊಯ್ಲಿ, ಇಬ್ರಾಹಿಂ, ರೇವಣ್ಣ, ಮೋಟಮ್ಮ ಯಾರಿಗೂ ಕೋವಿಡ್ ಬರುತ್ತಿರಲಿಲ್ಲ. ಜಾಣನಿಗೆ ಮಾತಿನ ಪೆಟ್ಟು. ದಡ್ಡನಿಗೆ ದೊಣ್ಣೆ ಪೆಟ್ಟು ಅಂತಾ ಹಿರಿಯರು ಹೇಳಿದ್ದಾರೆ.

ನಾವು ಮುಂಚೆಯಿಂದವೂ ಹೇಳಿಕೊಂಡೇ ಬಂದೆವು ಪಾದಯಾತ್ರೆ ಬೇಡ ಎಂದು, ನಮ್ಮ ಮಾತು ಕೇಳಿದ್ದರೆ ಖರ್ಗೆ, ಮೊಯ್ಲಿ, ಇಬ್ರಾಹಿಂ, ರೇವಣ್ಣ, ಮೋಟಮ್ಮ ಯಾರಿಗೂ ಕೋವಿಡ್ ಬರುತ್ತಿರಲಿಲ್ಲ ಎಂದರು. ಹೀಗೆ ಕಾಂಗ್ರೆಸ್ ನಾಯಕರ ಪಟ್ಟಿಯನ್ನು ಕೊಡಬಹುದು.ಅಷ್ಟು ಜನ ಇವತ್ತು ಕೋವಿಡ್ ಗೆ ತುತ್ತಾಗಿದ್ದಾರೆ. ಅದಕ್ಕೆ ಕಾರಣ ಪಾದಯಾತ್ರೆ. ಇದರ ಜೊತೆಗೆ ರಾಜ್ಯದ ಬೇರೆ ಭಾಗದಿಂದ ಬಂದು, ಹೋಗಿದ್ದಾರೆ.

ಇವರ ರಾಜಕಾರಣದ ಬೇಳೆ ಬೇಯಿಸಿಕೊಳ್ಳಲು, ತಾವು ತೊಂದರೆ ಅನುಭವಿಸಿ, ರಾಜ್ಯಕ್ಕೂ ತೊಂದರೆ ಕೊಟ್ಟರು.ಇಂತಹ ವ್ಯವಸ್ಥೆ ಇರೋದು ಕಾಂಗ್ರೆಸ್ ನಲ್ಲಿ ಮಾತ್ರ. ಜನರ ಹಿತಕ್ಕಾಗಿ ವಾಪಾಸ್ ತೆಗೆದುಕೊಂಡೆವು ಅಂತಾ ಈಗ ಹೇಳುತ್ತಿದ್ದಾರೆ.ಹಾಗಾದರೆ ಆರಂಭದಲ್ಲಿ ಜನರ ಹಿತ ಗೊತ್ತಿರಲಿಲ್ವಾ..? ಕೋರ್ಟ್ ಹೇಳ್ಬೇಕಾಯ್ತಾ..ಎಂದು ಪ್ರಶ್ನಿಸಿದರು.

ಇದನ್ನು ಒದಿ : https://cnewstv.in/?p=7546

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*