Breaking News

ಗ್ರಾಮಾಂತರ ಪೊಲೀಸರ ಭರ್ಜರಿ ಕಾರ್ಯಚರಣೆ, ಅಕ್ರಮವಾಗಿ ದಾಸ್ತಾನು ಮಾಡಿದ್ದ ಪಡಿತರ ಚೀಟಿಯ ಅಕ್ಕಿ ವಶ

Cnewstv.in / 13.01.2022 / ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಗ್ರಾಮಾಂತರ ಪೊಲೀಸರ ಭರ್ಜರಿ ಕಾರ್ಯಚರಣೆ, ಅಕ್ರಮವಾಗಿ ದಾಸ್ತಾನು ಮಾಡಿದ್ದ ಪಡಿತರ ಚೀಟಿಯ ಅಕ್ಕಿ ವಶ

ಶಿವಮೊಗ್ಗ : ಗ್ರಾಮಾಂತರ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿದ್ದಾರೆ‌. ಅಕ್ರಮವಾಗಿ ದಾಸ್ತಾನು ಮಾಡಿದ್ದ ಪಡಿತರ ಚೀಟಿಯ 195 ಕೆಜಿ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.

ಶಿವಮೊಗ್ಗ ಹೊರವಲಯದ ಗೋಂದಿ ಚಟ್ನಳ್ಳಿಯ ಮಲ್ಲಿಕಾರ್ಜುನ ರೈಸ್ ಮಿಲ್ ಹಿಂಭಾಗದ ಗೋಡನ್ ನಲ್ಲಿ ಪಡಿತರ ಚೀಟಿಯ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿರುತ್ತಾರೆ ಎಂಬ ಖಚಿತ ಮಾಹಿತಿ ಮೇರೆಗೆ ಇಂದು ಬೆಳಿಗ್ಗೆ ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಸಂಜೀವ ಕುಮಾರ್ ಮತ್ತು ಸಿಬ್ಬಂದಿ ಗಳು ದಾಳಿ ಮಾಡಿದ ಘಟನೆ ವರದಿಯಾಗಿದೆ.

ನ್ಯಾಯಾಬೆಲೆಯಲ್ಲಿ ಅಂಗಡಿಯಲ್ಲಿ ಮಾರುವ ಅಕ್ಕಿಯನ್ನ ಸಂಗ್ರಹಿಸಿ ಮತ್ತೆ ಪಾಲಿಶ್ ಹಾಕಿಸಿ ಹೊರಗಡೆ ಮಾರಾಟ ಮಾಡುವ ಮುಂದಾಗಿದ್ದರು.

ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಸಂಜೀವ ಕುಮಾರ್ ರವರು ಗೋಡೌನ್ ನಲ್ಲಿ ಅಕ್ರಮವಾಗಿ ಶೇಖರಿಸಿದ ಪಡಿತರ ಅಕ್ಕಿ ಯನ್ನು ಸೀಜ್ ಮಾಡಿ ವಶಕ್ಕೆ ಪಡೆದಿರುತ್ತಾರೆ.

ಇದನ್ನು ಒದಿ : https://cnewstv.in/?p=7540

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*