Breaking News

ಕಾಂಗ್ರೆಸ್ ಪಾದಯಾತ್ರೆ ಬಿಡದಿ ತಲುಪುತ್ತಾ ?? ರಾಹುಲ್ ಗಾಂಧಿ ನೀಡಿದ ಸೂಚನೆ ಏನು ??

Cnewstv.in / 13.01.2022 / ರಾಮನಗರ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಕಾಂಗ್ರೆಸ್ ಪಾದಯಾತ್ರೆ : ಬಿಡದಿ ತಲುಪುತ್ತಾ ?? ರಾಹುಲ್ ಗಾಂಧಿ ನೀಡಿದ ಸೂಚನೆ ಏನು ??

ರಾಮನಗರ : ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿದ್ದು, ಅನೇಕ ಪರ-ವಿರೋಧಗಳ ನಡುವೆಯೂ ಯಶಸ್ವಿಯಾಗಿ ನಾಲ್ಕು ದಿನಗಳನ್ನು ಮುಗಿಸಿದ ಕಾಂಗ್ರೆಸ್ ಪಾದಯಾತ್ರೆ ಇಂದು ಐದನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಇಂದು ನಡೆಯಲಿರುವ ಪಾದಯಾತ್ರೆ ಸಾಕಷ್ಟು ಕುತೂಹಲ ಕೆರಳಿಸಿದೆ. ಇಂದು ರಾಮನಗರದಿಂದ ಬಿಡದಿಗೆ ಹೊರಟಿದ್ದ ಪಾದಯಾತ್ರೆ. ‌

ರಾಮನಗರ ಜಿಲ್ಲಾಡಳಿತಕ್ಕೆ ಹಾಗೂ ಕೆಪಿಸಿಸಿಗೆ ರಾಜ್ಯ ಹೈಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ರಾಮನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕೈ ನಾಯಕರ ಮಹತ್ವದ ಸಭೆ ನಡೆಯುತ್ತಿದೆ.

ರಾಹುಲ್ ಗಾಂಧಿ ನೀಡಿದ ಸೂಚನೆ ಏನು :

ರಾಜ್ಯ ಹೈಕೋರ್ಟ್ ಕೆಪಿಸಿಸಿಗೆ ನೋಟಿಸ್ ಜಾರಿ ಮಾಡಿತ್ತು, ಕಾಂಗ್ರೆಸ್ ಪಕ್ಷದ ಅಧಿನಾಯಕ ರಾಹುಲ್ ಗಾಂಧಿಯವರು ಪಕ್ಷಕ್ಕೆ ಮುಜುಗರವನ್ನುಂಟು ಮಾಡದಿರಿ ಎಂಬ ಸಂದೇಶವನ್ನು ಡಿಕೆ ಶಿವಕುಮಾರ್ ಅವರಿಗೆ ನೀಡಿದ್ದಾರೆ.

ಒಂದು ವೇಳೆ ಇಂದು ಏನಾದರೂ ಕಾಂಗ್ರೆಸ್ ನಾಯಕರು ಪಾದಯಾತ್ರೆಯ ಮುಂದುವರೆಸಿದರೆ, ರಾಮನಗರ ಜಿಲ್ಲಾಡಳಿತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ.

ಇದನ್ನು ಒದಿ : https://cnewstv.in/?p=7525

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*