Cnewstv.in / 12.01.2022 / ಬೆಂಗಳೂರು / ಸಿನಿಮಾ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಟಾಲಿವುಡ್ ಗೆ ಎಂಟ್ರಿ ಕೊಟ್ಟ ರಚಿತಾ ರಾಮ್.
ಬೆಂಗಳೂರು : ಸ್ಯಾಂಪಲ್ ವುಡ್ ನಲ್ಲಿ ಡಿಂಪಲ್ ಕ್ವೀನ್ ಎಂದೇ ಹೆಸರಾಗಿರುವ ಸ್ಟಾರ್ ನಟಿ ರಚಿತಾ ರಾಮ್. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯಸಿಯಾಗಿದ್ದ ರಚಿತರಾಮ್ ಇದೀಗ ಟಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.
ರಚಿತಾ ರಾಮ್ ಅಭಿನಯದ ಮೊದಲ ತೆಲುಗಿನ ಸಿನಿಮಾ “ಸೂಪರ್ ಮಚ್ಚಿ” ರಿಲೀಸಿಗೆ ರೆಡಿಯಾಗಿದೆ. ಸೂಪರ್ ಮಚ್ಚಿ ಸಿನಿಮಾದ ಟ್ರೈಲರ್ ಈಗಾಗಲೇ ರಿಲೀಸ್ ಆಗಿದ್ದು ಸ್ಯಾಂಡ್ ವುಡ್ ಮತ್ತು ಟಾಲಿವುಡ್ ಸಿನಿ ಪ್ರೇಮಿಗಳು ರಚಿತಾ ರಾಮ್ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ಯಾಂಪಲ್ ವುಡ್ ನಲ್ಲಿ ತಮ್ಮ ಅತ್ಯುತ್ತಮ ನಟನೆಯಿಂದ ಸೈ ಎನಿಸಿಕೊಂಡಿದ್ದ ರಚಿತಾರಾಮ್ ಗೆ ಟಾಲಿವುಡ್ ನಲ್ಲಿ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಸೂಪರ್ ಮಚ್ಚಿ ಸಿನಿಮಾದ ಟ್ರೈಲರ್ ಗೆ ಜನ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.
ಪುಲಿ ವಾಸುದೇವ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಸೂಪರ್ ಮೆಚ್ಚಿ ಸಿನಿಮಾದಲ್ಲಿ ಕಲ್ಯಾಣ್ ದೇವ್ ನಾಯಕನಾಗಿ ನಟಿಸಿದ್ದಾರೆ. ರಿಜ್ವಾನ್ ಬಂಡವಾಳ ಹೂಡಿದ್ದು, ಎಸ್.ಎಸ್ ತಮನ್ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ. ಕೊರೊನಾ ಕರಿನೆರಳು ಇಲ್ಲದೆ ಹೋದರೆ ಇದೇ ತಿಂಗಳ 14 ರಂದು ಸೂಪರ್ ಮೆಚ್ಚಿ ಸಿನೆಮಾ ರಿಲೀಸ್ ಆಗಲಿದೆ
ಇದನ್ನು ಒದಿ : https://cnewstv.in/?p=7508
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv