Breaking News

ರಾಜಧಾನಿಗೆ ಕೊರೋನಾ ಹಬ್ಬಿಸುವುದು ನಿಮ್ಮ ಉದ್ದೇಶವೇ?

Cnewstv.in / 11.01.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ರಾಜಧಾನಿಗೆ ಕೊರೋನಾ ಹಬ್ಬಿಸುವುದು ನಿಮ್ಮ ಉದ್ದೇಶವೇ?

ಬೆಂಗಳೂರು: ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ ವಿರುದ್ಧ ಮತ್ತೆ ಬಿಜೆಪಿ ಟ್ವಿಟರ್ ನಲ್ಲಿ ವಾಗ್ದಾಳಿ ನಡೆಸಿದೆ.

ಕೊರೋನಾ ಸ್ಪ್ರೆಡರ್ ಡಿಕೆ ಸೋದರರೆ, ನಿಮ್ಮ ಸುಳ್ಳಿನ ಜಾತ್ರೆ ಪ್ರಹಸನದಲ್ಲಿ ಇಪ್ಪತ್ತು ನಿಮಿಷ, ಅರ್ಧಗಂಟೆಯ ನಡಿಗೆ ನಾಟಕವಾಡುತ್ತಿರುವ ಕಾಂಗ್ರೆಸ್ ಪುಢಾರಿಗಳು ಬೆಂಗಳೂರಿಗೆ ವಾಪಾಸ್ ಆಗುತ್ತಿದ್ದಾರೆ. ಅವರೆಲ್ಲರೂ ಕೋವಿಡ್ ಸೋಂಕಿನ ಸಂಭಾವ್ಯ ವಾಹಕಗಳು. ರಾಜಧಾನಿಗೆ ಕೊರೋನಾ ಹಬ್ಬಿಸುವುದು ನಿಮ್ಮ ಉದ್ದೇಶವೇ ಎಂದು ಪ್ರಶ್ನಿಸಿದೆ.

ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಸುಳ್ಳಿನ ಜಾತ್ರೆ ಈಗ ಕೊರೋನಾ ಮೂರನೇ ಅಲೆಯ ಸೂಪರ್ ಸ್ಪ್ರೆಡರ್ ಆಗುತ್ತಿದೆ. ಕೋವಿಡ್‌ ಮೊದಲನೇ ಅಲೆಯ ಸಂದರ್ಭದಲ್ಲಿ ದೇಶವನ್ನು ಕಾಡಿದ್ದ ತಬ್ಲಿಘಿಗಳ ರೀತಿ ಈಗ ಡಿಕೆಶಿ ಸೋದರರು ಪಾದಯಾತ್ರೆಯ ನೆಪದಲ್ಲಿ ರಾಜ್ಯದಲ್ಲಿ ಕೊರೋನಾ ಹಂಚುತ್ತಿದ್ದಾರೆ. ಕೋವಿಡ್‌ ಸೂಪರ್ ಸ್ಪ್ರೆಡರ್ ಕಾಂಗ್ರೆಸ್ ಎಂದು ಟೀಕಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಪಾದಯಾತ್ರೆ ತಬ್ಲಿಘಿಗಳಿಗೆ ಸಮ ಎಂದು ಕಿಡಿ ಕಾರಿದೆ. ಕಾಂಗ್ರೆಸ್ ಪಾದಯಾತ್ರೆ ಮತ್ತು ತಬ್ಲಿಘಿ ಇಬ್ಬರೂ ಹರಡುತ್ತಿರುವುದು ಕೋವಿಡ್ ಸೋಂಕು. ತಬ್ಲಿಘಿಗಳು ಮೊದಲನೇ ಅಲೆಗೆ ಕಾರಣರಾದರೆ ಕಾಂಗ್ರೆಸ್ಸಿಗರು ಮೂರನೇ ಅಲೆಗೆ ಕಾರಣವಾಗುತ್ತಿದ್ದಾರೆ.

ಇದನ್ನು ಒದಿ : https://cnewstv.in/?p=7492

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*