Cnewstv.in / 11.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ನಗರದ 27 ನೇ ವಾರ್ಡಿನ ಮಿಳಘಟ್ಟ ಕೆರೆ ಜಾಗದ ಪಕ್ಕದಲ್ಲಿ ಸಂತ ಮಾರುಕಟ್ಟೆ ಕಾಂಪ್ಲೆಕ್ಸ್ ನಿರ್ಮಾಣದ ಮುನ್ನ ಮನೆಗಳ ಮುಂದೆ 30 ಅಡಿ ರಸ್ತೆ ನಿರ್ಮಿಸಿ ಎಂದು ಮಿಳಘಟ್ಟ ನಿವಾಸಿಗಳ ಸಂಘದ ವತಿಯಿಂದ ಮೇಯರ್ ಗೆ ಮನವಿ ಸಲ್ಲಿಸಲಾಯಿತು.
ಮಿಳಘಟ್ಟದ ಕೆರೆಯ ಜಾಗದಲ್ಲಿ ಮಂಗಳವಾರದ ಸಂತ ಮೈದಾನ ನಡೆಸಲು ಯೋಜಿಸಿರುವುದು ಸರಿಯಷ್ಟೇ ಈ ಕರೆಯ ಜಾಗದಲ್ಲಿ ಸಂತೆಗಾಗಿ ಮೊದಲ ಹಂತದಲ್ಲಿ ಕಾಂಪ್ಲೆಕ್ಸ್ ನಿರ್ಮಿಸಲು ಈಗಾಗಲೇ ಗುತ್ತಿಗೆ ನೀಡಲಾಗಿರುವುದಾಗಿ ಹಾಗೂ ಕಾಮಗಾರಿ ಆರಂಭಗೊಳ್ಳುತ್ತಿರುವುದಾಗಿ ತಿಳಿದು ಬಂದಿದ್ದು,
ಕೆರಯ ಜಾಗದ ಸುತ್ತಲೂ ಇರುವ ಒಂದು ಭಾಗದಲ್ಲಿ 60 ಕ್ಕಿಂತ ಹೆಚ್ಚಿನ ಮನೆಗಳಿವೆ. ಈ ಮನೆಗಳು ಅತ್ಯಂತ ಕಡುಬಡತನದಲ್ಲಿರುವ ಕೂಲಿ ಕಾರ್ಮಿಕರದ್ದೇ ಆಗಿವೆ.
ಈ ಮನೆಗಳ ಜನರು ಓಡಾಡಲು ಇದೇ ಕೆರೆಯ ಜಾಗವನ್ನು ಅವಲಂಭಿಸಿ ಕಳೆದ 40-45 ವರ್ಷಗಳಿಂದಲೂ ಬದುಕು ಸಾಗಿಸುತ್ತಾ ಬಂದಿದ್ದಾರೆ. ಸದರಿ ಕೆರಯ ಜಾಗದಲ್ಲಿ ಸಂತೆಗೆ ಅನುಕೂಲವಾಗುವಂತ ಕಾಂಪ್ಲೆಕ್ಸ್ ನಿರ್ಮಿಸಲು ಶಿವಮೊಗ್ಗ
ಮಹಾನಗರ ಪಾಲಿಕೆ ನಿರ್ಧರಿಸಿದ್ದು, ಇಲ್ಲಿ ಬಡವರ ಮನೆ ಬಾಗಿಲುಗಳ ಮುಂದೆಯೇ 15 ಅಡಿ ಎತ್ತರದ
ಕಾಂಪೌಂಡ್ ನಿರ್ಮಿಸಲು ಹೊರಟಿರುವುದು ಅತ್ಯಂತ ಅಮಾನವೀಯ ಕೆಲಸವಾಗಿದೆ.
ಮನೆಗಳನ್ನು ಕಟ್ಟಿಕೊಂಡು ಜೀವನ ನಡೆಸುತ್ತ ಬಂದಿರುವ ಜನರಿಗೆ ಓಡಾಡಲು ರಸ್ತೆಯನ್ನೂ ಬಿಡದೇ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದು ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆ ಮತ್ತು ಜನವಿರೋಧಿ ಹಾಗೂ ಸರ್ವಾಧಿಕಾರಿ ಧೋರಣೆಯನ್ನು ಎತ್ತಿ ತೋರಿಸುತ್ತಿದೆ.
ಕೂಡಲೇ, ಈ ಜನರಿಗೆ ಅನುಕೂಲವಾಗುವಂತೆ 30 ಅಡಿ ರಸ್ತೆಗೆ ಜಾಗಬಿಡಬೇಕು. ಆ ಮೂಲಕ ಇಲ್ಲಿನ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕು. ಈ ಮೂಲ ಸೌಕರ್ಯಗಳನ್ನು ಕೂಡಲೇ ಒದಗಿಸದಿದ್ದರೆ ಮುಂದಿನ ದಿನಗಳಲ್ಲಿ ಕಾಮಗಾರಿ ನಡೆಯುವ ಸ್ಥಳದಲ್ಲಿಯೇ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ನಾಗರಾಜ್ ಕಂಕಾರಿ, ಪಾಲಾಕ್ಷಿ, ಜೆಡಿಎಸ್ ಶಿವು, ಪತ್ರಕರ್ತ ಶಿ.ಜು.ಪಾಶ, ವಾಸಿಂ ಮೊದಲಾದವರು ಉಪಸ್ಥಿತರಿದ್ದರು.
ಇದನ್ನು ಒದಿ : https://cnewstv.in/?p=7470
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv