Cnewstv.in / 11.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಅಂಬೇಡ್ಕರ್ ಅಭಿವೃದ್ದಿ ನಿಗಮದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ : ಹೆಚ್.ನಾಗೇಶ್
ಶಿವಮೊಗ್ಗ : ಹಿಂದುಳಿದ ವರ್ಗಗಳಿಗೆ ಸಮಾನತೆ ಒದಗಿಸಿ, ಮುಖ್ಯವಾಹಿನಿಗೆ ತರಲೆಂದು ಸರ್ಕಾರ ವಿವಿಧ ನಿಗಮಗಳನ್ನು ಸ್ಥಾಪಿಸಿದ್ದು, ಅಂಬೇಡ್ಕರ್ ಅಭಿವೃದ್ದಿ ನಿಗಮದಡಿ ಇರುವ ಯೋಜನೆಗಳನ್ನು ಫಲಾನುಭವಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧ್ಯಕ್ಷ ಹೆಚ್.ನಾಗೇಶ್ ಹೇಳಿದರು.
ಯಾವುದೇ ರೀತಿಯ ಕುಂದುಕೊರತೆಗಳು ಇದ್ದಲ್ಲಿ ಫಲಾನುಭವಿಗಳು ನೇರವಾಗಿ ತಮ್ಮ ಕಚೇರಿಗೆ ಅಥವಾ ತಮ್ಮನ್ನು ಸಂಪರ್ಕಿಸಿ ಬಗೆಹರಿಸಿಕೊಳ್ಳುವಂತೆ ಅಭಯ ನೀಡಿದರು.
ಶಿವಮೊಗ್ಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದ ಶಿವಮೊಗ್ಗ ಜಿಲ್ಲಾ ಕಚೇರಿಯು ಬಾಡಿಗೆ ಕಟ್ಟಡದಲ್ಲಿತ್ತು. ಇದೀಗ ಸರ್ಕಾರದಿಂದ ಕಟ್ಟಡಕ್ಕೆ ಭೂಮಿ ಮಂಜೂರಾಗಿ ಶಿಲಾನ್ಯಾಸ ನೆರವೇರಿಸಿದ್ದು, ನಮ್ಮ ಸರ್ಕಾರದ ಅವಧಿಯಲ್ಲೇ ಕಟ್ಟಡ ಉದ್ಘಾಟನೆ ಮಾಡುವ ಯೋಜನೆಯಿದೆ. 2018-19 ನೇ ಸಾಲಿನಲ್ಲಿ ಕೊರೆಸಲಾದ ಬೋರ್‍ಗಳ ಫಲಾನುಭವಿಗಳಿಗೆ ಪಂಪ್‍ಸೆಟ್ ಹಾಗೂ ನೇರಸಾಲ ಯೋಜನೆಯಡಿ ಸೌಲಭ್ಯ ವಿತರಣೆಯನ್ನು ಇಂದು ಸಾಂಕೇತಿಕವಾಗಿ ಮಾಡಲಾಗುವುದು.
ಅಂಬೇಡ್ಕರ್ ಅಭಿವೃದ್ದಿ ನಿಗಮದಡಿಯ ಯೋಜನೆಗಳು ಫಲಾನುಭವಿಗಳನ್ನು ತಲುಪಲು ಹಿಂದೆ ಮಧ್ಯವರ್ತಿಗಳ ಕಾಟ ಇತ್ತು. ಅದನ್ನು ತಪ್ಪಿಸಲು ಫಲಾನುಭವಿಗಳಿಗೆ ನೇರವಾಗಿ ಸೌಲಭ್ಯ ನೀಡುವ ಆರ್‍ಟಿಜಿಎಸ್ ನೇರಪಾವತಿ ವ್ಯವಸ್ಥೆ ಮಾಡಲಾಗಿದೆ. 225 ವಿಧಾನಸಭಾ ಕ್ಷೇತ್ರಗಳಿಗೂ ನಿಗಮದ ಅನುದಾನ ಹಂಚಿಕೆಯಾಗಿದ್ದು ಮುಂಬರುವ ಅನುದಾನವನ್ನೂ ಮರು ಹಂಚಿಕೆ ಮಾಡಲಾಗುವುದು. ಉತ್ತರ ಕರ್ನಾಟಕ ಭಾಗದಲ್ಲಿ ಭೂ ಒಡೆತನ ಯೋಜನೆಯಡಿ ಫಲಾನುಭವಿಗಳು ಸೌಲಭ್ಯ ಪಡೆಯುತ್ತಿದ್ದು, ಈ ಭಾಗದಲ್ಲಿ ಕೂಡ ಫಲಾನುಭವಿಗಳು ಮುಂದೆ ಬರಬೇಕು ಎಂದರು.
ಇದನ್ನು ಒದಿ : https://cnewstv.in/?p=7467
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv