Breaking News

ಶಿವಮೊಗ್ಗ ನಗರದ ಜನತೆಯನ್ನು ಕೋವಿಡ್‌ನಿಂದ ರಕ್ಷಿಸಲು ಪ್ರಥಮವಾಗಿ ಸಚಿವ ಕೆ ಎಸ್ ಈಶ್ವರಪ್ಪ ರವರನ್ನು ಕ್ವಾರೆಂಟೈನ್ ಮಾಡುವ ಅವಶ್ಯಕತೆ ಖಂಡಿತ ಇದೆ – ಹೆಚ್.ಎಸ್ ಸುಂದರೇಶ್

Cnewstv.in / 11.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಶಿವಮೊಗ್ಗ : ತಮಿಳುನಾಡು ಮೇಲ್ವರುವತ್ತೂರು ಓಂ ಶಕ್ತಿ ದೇವಸ್ಥಾನಕ್ಕೆ ಮತ್ತು ಇತರೆ ಊರುಗಳಿಗೆ ಶಿವಮೊಗ್ಗದಿಂದ ಹೋಗಿ ಪ್ರವಾಸ ಮಾಡಿ ಬಂದವರಲ್ಲಿ 83 ಮಂದಿಗೆ ಕೋವಿಡ್ ದೃಢಪಟ್ಟಿದೆ. ಇದರೊಂದಿಗೆ ಕೋವಿಡ್ ಪೀಡಿತ ಓಂ ಶಕ್ತಿ ಭಕ್ತರ ಸಂಖ್ಯೆ 148 ಕ್ಕೆ ಏರಿಕೆಯಾಗಿದೆ. ಈ ಸಂಖ್ಯೆ ದಿನೇ ದಿನೇ ಪ್ರಕರಣಗಳ ಸಂಖ್ಯೆ ಸಕ್ರಿಯವಾಗಿ ಮುನ್ನಡೆಯುತ್ತಿರುವ ವರದಿ ಗಮನಿಸಿದಾಗ ಆತಂಕಕ್ಕೀಡು ಮಾಡಿದೆ. ಗ್ರಾಮೀಣಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ ಎಸ್ ಈಶ್ವರಪ್ಪ ರವರೆ ಮುಖ್ಯ ಕಾರಣವಾಗಿದ್ದಾರೆ. ಆದ್ದರಿಂದ ಸಚಿವ ಸ್ಥಾನದಿಂದ ತಕ್ಷಣ ಪದಚ್ಯುತಿಗೊಳಿಸಿ ಕ್ರಮ ಕೈಗೊಳ್ಳಬೇಕೆಂದು ರಾಜ್ಯಪಾಲರನ್ನು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಹೆಚ್.ಎಸ್ ಸುಂದರೇಶ್ ರವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರ ನಿಯೋಗ ಶಿವಮೊಗ್ಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಒತ್ತಯಪಡಿಸಲಾಯಿತು.

ಜನವರಿ 5 ರಂದು ಬುಧವಾರ ಬೆಳಗ್ಗೆ ಶಿವಮೊಗ್ಗಕ್ಕೆ ಹಿಂತಿರುಗಿದ 4100 ಓಂ ಶಕ್ತಿ ಭಕ್ತರಲ್ಲಿ 600 ಮಂದಿಗೆ ಮಾತ್ರ ಕ್ಯಾಪಿಡ್ ಟೆಸ್ಟ್ ಮಾಡಲಾಗಿದೆ. ಇದರಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿದ್ದು. ಒಂದೇ ದಿನದಲ್ಲಿ ಬೆಂಗಳೂಗಿಂತ ಅತ್ಯಧಿಕ ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿದ್ದು, ಕೊರೋನಾ ಶಿವಮೊಗ್ಗದಲ್ಲಿ ಉಲ್ಬಣಿಸುವ ಸೂಚನೆಯು ಧೃಡಪಟ್ಟಿದೆ.

ಓಂ ಶಕ್ತಿ ದೇವಸ್ಥಾನಕ್ಕೆ ಪ್ರವಾಸ ಮಾಡಿ ಶಿವಮೊಗ್ಗಕ್ಕೆ ಬಂದಿದ್ದು, ಸಚಿವ ಕೆ ಎಸ್ ಈಶ್ವರಪ್ಪ ಅವರು ಹೋಂ
ಕ್ವಾರಂಟೈನ್ ಆಗದೇ ಬುದವಾರ ಇಡೀ ದಿನ ಶಿವಮೊಗ್ಗದಲ್ಲಿ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಪಾಲ್ಗೊಂಡು ಯಾವುದೇ ಅತಂರವನ್ನು ಕಾಪಾಡಿಕೊಳ್ಳದೇ ಎಲ್ಲರ ಹೆಗಲ ಮೇಲೆ ಕೈ ಹಾಕಿ ಸಂಪರ್ಕ ಮಾಡಿರುವುದು ಮತ್ತೊಷ್ಟು ಆತಂಕಕ್ಕೆ ಈಡು ಮಾಡಿದೆ.

ಇದರಿಂದ ಇವರ ಸಂಪರ್ಕ ಬೆಳೆಸಿದ ಎಲ್ಲರೂ ಕ್ಯಾಪಿಡ್ ಟೆಸ್ಸೆಗೆ ಒಳಗಾಗಬೇಕಾದ ಪರಿಸ್ಥಿತಿ ಉಂಟಾಗಿದೆ. ಭಕ್ತರ ಜೊತೆ ತಮಿಳುನಾಡಿಗೆ ಹೋಗಿ ಬಂದಿದ್ದ ಸಚಿವ ಈಶ್ವರಪ್ಪಗೆ ಏಕೆ? ಕ್ವಾರಂಟೈನ್- ಕ್ಯಾಪಿಡ್ ಟೆಸ್ಟ್ ಮಾಡಲಿಲ್ಲ ? ಸಾಮಾನ್ಯರ ಜನರಿಗೆ ಸಚಿವರಿಗೆ ಬೇಧ ಭಾವ ಏಕೆ ? ಇದಕ್ಕೆ ಕಾರಣ ಈಶ್ವರಪ್ಪ ರವರು ಹೊಂದಿರುವ ಸಚಿವ ಸ್ಥಾನ ಈ ಮಂತ್ರಿ ಸ್ಥಾನದಿಂದ ಈಶ್ವರಪ್ಪರವನ್ನು ಬಿಡುಗಡೆ ಮಾಡಬೇಕಾದದ್ದು, ಅಗತ್ಯ ಸಚಿವ ಸ್ಥಾನವನ್ನು ದುರುಪಯೋಗ ಮಾಡಿಕೊಂಡು ಶಿವಮೊಗ್ಗದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗಲು ಕಾರಣವಾಗಿದ್ದಾರೆ. ಆದ್ದರಿಂದ ರಾಜ್ಯಪಾಲರು ಇವರನ್ನು ಮಂತ್ರಿ ಸ್ಥಾನದಿಂದ ಕಿತ್ತುಹಾಕಬೇಕು ಎಂದು ಒತ್ತಾಯ ಪಡಿಸಿದರು.

ಇದನ್ನು ಒದಿ : https://cnewstv.in/?p=7465

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*