Breaking News

200 ಕೆ.ಜಿ.ಗಾಂಜಾ ಜಪ್ತಿ

Cnewstv.in / 11.01.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

200 ಕೆ.ಜಿ.ಗಾಂಜಾ ಜಪ್ತಿ

ಬೆಂಗಳೂರು: ಆಂಧ್ರಪ್ರದೇಶದಲ್ಲಿ ಬೆಳೆದ ಗಾಂಜಾವನ್ನು ರೌಡಿಗಳ ನೆರವಿನಿಂದ ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದ ನಾಲ್ವರು ಪೆಡ್ಲರ್‌ಗಳನ್ನು ಕೆಂಪೇಗೌಡ ನಗರ (ಕೆ.ಜಿ.ನಗರ) ಠಾಣೆ ಪೊಲೀಸರು ಬಂಧಿಸಿದ್ದಾರೆ. ‌

ಆರೋಪಿಗಳಿಂದ ₹60 ಲಕ್ಷ ಮೌಲ್ಯದ 200 ಕೆ.ಜಿ. ಗಾಂಜಾ ಹಾಗೂ ಒಂದು ಟಾಟಾ ಮ್ಯಾಜಿಕ್‌ ಏಸ್‌ ವಾಹನ ಜಪ್ತಿ ಮಾಡಲಾಗಿದೆ.

‘ಪೋತಯ್ಯ (19), ಪಲ್ಲೆಂ ವರಪ್ರಸಾದ್‌ (19), ವಂಥಲಾ ರಮೇಶ್‌ (19) ಹಾಗೂ ಕೊಂಡಜ್ಜಿ ಪ್ರಸಾದ್‌ (19) ಬಂಧಿತರು. ಇವರೆಲ್ಲ ಪೂರ್ವ ಗೋದಾವರಿ ಹಾಗೂ ವಿಶಾಖಪಟ್ಟಣ ಜಿಲ್ಲೆಯವರು’ ಎಂದು ಪೊಲೀಸರು ಹೇಳಿದ್ದಾರೆ.‌

ಠಾಣಾ ಸರಹದ್ದಿನಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುವವರು ಹಾಗೂ ಮಾದಕ ವ್ಯಸನಿಗಳ ಮೇಲೆ ಹದ್ದಿನ ಕಣ್ಣಿಡಲು ವಿಶೇಷ ತಂಡವೊಂದನ್ನು ರಚಿಸಲಾಗಿತ್ತು. ಇದೇ 7ರಂದು ಠಾಣೆ ವ್ಯಾಪ್ತಿಯ ಜಿಂಕೆ ಪಾರ್ಕ್‌ ಬಳಿಯ ಧೋಬಿಘಾಟ್‌ ಮುಖ್ಯರಸ್ತೆಯಲ್ಲಿ ಆರೋಪಿಗಳು ಮೂಟೆಗಳಲ್ಲಿ ಗಾಂಜಾ ತುಂಬಿಕೊಂಡು ಬಂದು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಅದರ ಆಧಾರದಲ್ಲಿ ದಾಳಿ ನಡೆಸಿ ನಾಲ್ವರನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ವಾಹನವನ್ನೂ ಜಪ್ತಿ ಮಾಡಲಾಗಿದೆ’ ಎಂದು ವಿವರಿಸಿದರು.

ಆರೋಪಿಗಳು ಈ ಹಿಂದೆ ನಗರದ ರೌಡಿಗಳಾದ ಕುಳ್ಳು ರಿಜ್ವಾನ್‌, ಸ್ಟಾರ್‌ ನವೀನ್‌, ಸ್ಟಾರ್‌ ರಾಹುಲ, ಉಲ್ಲಾಳ ಕಾರ್ತಿಕ್‌, ಉಲ್ಲಾಳ ಹಮೀದ್‌ ಹಾಗೂ ಸನಾವುಲ್ಲ ಎಂಬುವರಿಗೆ ಗಾಂಜಾ ಮಾರಿದ್ದನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಆಂಧ್ರದಿಂದ ತಂದ ಗಾಂಜಾವನ್ನು ರೌಡಿಶೀಟರ್‌ಗಳ ನೆರವಿನಿಂದ ನಗರದ ವಿವಿಧೆಡೆ ಮಾರಾಟ ಮಾಡುತ್ತಿದ್ದುದಾಗಿಯೂ ತಿಳಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

ಇದನ್ನು ಒದಿ : https://cnewstv.in/?p=7461

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*