Breaking News

ವಿಕೇಂಡ್ ಕರ್ಫ್ಯೂ : ಸ್ತಬ್ಧವಾಗುತ್ತಿದೆ ನಗರ

Cnewstv.in / 07.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ವಿಕೇಂಡ್ ಕರ್ಫ್ಯೂ : ಸ್ತಬ್ಧವಾಗುತ್ತಿದೆ ನಗರ

ಶಿವಮೊಗ್ಗ : ರಾಜ್ಯಾದ್ಯಂತ ಕೊರೋನಾ ರೂಪಾಂತರಿ ಒಮಿಕ್ರಾನ್ ಸೋಂಕು ಹೆಚ್ಚಾಗುತ್ತಿದ್ದು ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿಕೇಂಡ್ ಕರ್ಫ್ಯೂ ಘೋಷಣೆ ಮಾಡಿದ್ದಾರೆ.

ಇಂದು ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೂ ನೈಟ್ ಕರ್ಫ್ಯೂ ಜಾರಿಯಲ್ಲಿದೆ. ಪ್ರಮುಖ ವರ್ತಕರು 9 ಗಂಟೆಯಿಂದಲೇ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ತೆರಳುತ್ತಿದ್ದರು.

ಜನರ ಅಗತ್ಯವಾಗಿ ಓಡಾಡಬಾರದು ಎಂದು ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. ನಗರದ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಜೀಪ್ ನಲ್ಲಿ ಅನೌನ್ಸ್ ಮಾಡುತ್ತಾ, ಪೊಲೀಸರು ನಿರಂತರ ಗಸ್ತಿನಲ್ಲಿ ತೊಡಗಿದ್ದಾರೆ.

ಮತ್ತೊಂದೆಡೆ ನಗರದಲ್ಲಿ ಜನರ ಓಡಾಟ ಕಡಿಮೆಯಾಗಿದೆ.
ಬಸ್ಟಾಂಡ್, ಎ ಎ ಸರ್ಕಲ್, ಗೋಪಿ ವೃತ್ತ, ಗಾಂಧಿ ಬಜಾರ್, ನೆಹರು ರಸ್ತೆ, ‌ಬಿ.ಹೆಚ್ ರಸ್ತೆ, ದುರ್ಗಿಗುಡಿ ರಸ್ತೆಗಳು ಸ್ತಬ್ಧವಾಗುತ್ತಿವೆ.

ಇದನ್ನು ಒದಿ : https://cnewstv.in/?p=7409

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*