Breaking News

ವಿಕಲಚೇತನರ ಬಸ್‍ಪಾಸ್‍ಗೆ ಅರ್ಜಿ ಆಹ್ವಾನ.

Cnewstv.in / 07.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ವಿಕಲಚೇತನರ ಬಸ್‍ಪಾಸ್‍ಗೆ ಅರ್ಜಿ ಆಹ್ವಾನ.

ಶಿವಮೊಗ್ಗ : 2022 ನೇ ಸಾಲಿಗೆ ದಿ: 01-01-2022 ರಿಂದ 31-12-2022 ರವರೆಗೆ ಮಾನ್ಯತೆ ಇರುವಂತೆ ವಿಕಲಚೇತನರಿಗೆ ರಿಯಾಯಿತಿ ದರದ ಬಸ್‍ಪಾಸ್ ವಿತರಿಸಲು ಆನ್‍ಲೈನ್ ಮೂಲಕ ಸೇವಾಸಿಂಧು ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸು ಅವಕಾಶ ಕಲ್ಪಿಸಲಾಗಿದೆ.

2021 ನೇ ಸಾಲಿನಂತೆ 2022 ನೇ ಸಾಲಿನಲ್ಲಿಯೂ ಹೊಸದಾಗಿ/ನವೀಕರಣದ ವಿಕಲಚೇತನರ ರಿಯಾಯಿತಿ ಬಸ್‍ಪಾಸ್‍ಗಾಗಿ ಆನ್‍ಲೈನ್‍ನಲ್ಲಿ ಸರ್ಕಾರ ನಿಗದಿಪಡಿಸಿರುವ ಸೇವಾಸಿಂಧು ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ವಿಕಲಚೇತನ ಅರ್ಜಿದಾರರು ಆನ್‍ಲೈನ್‍ನಲ್ಲಿ ತಮ್ಮ ವಿವರಗಳನ್ನು ಭರ್ತಿಗೊಳಿಸಿ, ಅಗತ್ಯ ದಾಖಲೆಗಳನ್ನು ಜೆಪಿಜಿ ಅಥವಾ ಪಿಡಿಎಫ್‍ನಲ್ಲಿ ಅಡಕಗೊಳಿಸುವುದು. ವಿಕಲಚೇತನರ ರಿಯಾಯಿತಿ ಬಸ್‍ಪಾಸ್ ನವೀಕರಿಸಿಕೊಳ್ಳುವವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣದ ಪಾಸ್ ಕೌಂಟರ್‍ಗಳಲ್ಲಿ ಹಾಗೂ ಹೊಸದಾಗಿ ಪಾಸು ಪಡೆಯುವವರು ವಿಭಾಗೀಯ ಕಚೇರಿಗಳಲ್ಲಿ ಹಣ ಪಾವತಿಸಲು ಅವಕಾಶವಿರುತ್ತದೆ.

2021 ನೇ ಸಾಲಿನಲ್ಲಿ ವಿತರಿಸಲಾಗಿರುವ ಮತ್ತು ದಿನಾಂಕ : 31-12-2021 ರವರೆಗೆ ಮಾನ್ಯತೆ ಇರುವ, ವಿಕಲಚೇತನರ ಪಾಸ್‍ಗಳನ್ನು ಫೆ.28 ರವರೆಗೆ ಮಾನ್ಯ ಮಾಡಲಾಗಿದ್ದು ನವೀಕರಿಸಿಕೊಳ್ಳಬಹುದಾಗಿದೆ. ನವೀಕರಣಕ್ಕಾಗಿ ಫೆ.28 ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶಿಲ್ಪಾ ಎಂ.ದೊಡ್ಡಮನಿ ತಿಳಿಸಿದ್ದಾರೆ.

ಇದನ್ನು ಒದಿ : https://cnewstv.in/?p=7399

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*