Cnewstv.in / 07.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಓಂ ಶಕ್ತಿ ಯಾತ್ರೆಗೆ ತೆರಳಿದ್ದ ಆರು ಮಂದಿಗೆ ಕೋವಿಡ್ ಪಾಸಿಟಿವ್.
ಶಿವಮೊಗ್ಗ : ಓಂ ಶಕ್ತಿ ಯಾತ್ರೆಗೆ ತೆರಳಿದ್ದ ಶಿವಮೊಗ್ಗದ ಆರು ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಸೋಂಕಿತ ಆರು ಮಂದಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
31ರಂದು ನಗರದಿಂದ ಓಂ ಶಕ್ತಿ ಯಾತ್ರೆಗೆ ತೆರಳಿದ್ದವರು ಬುಧವಾರ ವಾಪಸಾಗಿದ್ದಾರೆ. ಸುಮಾರು 82 ಬಸ್ಸುಗಳಲ್ಲಿ 4 ಸಾವಿರಕ್ಕೂ ಅಧಿಕ ಮಂದಿ ತಮಿಳುನಾಡಿನ ಓಂ ಶಕ್ತಿ ಯಾತ್ರೆಗೆ ತೆರಳಿದ್ದರು. ಮೈಸೂರು, ನಂಜನಗೂಡು, ತಿರುವಣ್ಣಾಮಲೈ, ಕುಂಭಕೋಣಂ ಸೇರಿದಂತೆ ಹಲವಾರು ತೀರ್ಥಕ್ಷೇತ್ರಗಳಿಗೆ ತೆರಳಿದ್ದರು.
ಯಾತ್ರೆ ಮುಗಿಸಿ ಬಂದ ಎಲ್ಲರಿಗೂ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಯಾತ್ರೆಗೆ ತೆರಳಿದ್ದ ಎಲ್ಲರನ್ನೂ ಹೊಂ ಕ್ವಾರಂಟೈನ್ ಒಳಪಡಿಸಲಾಗಿತ್ತು. ಹೋಂ ಕ್ವಾರಂಟೈನ್ ನಲ್ಲಿದ್ದವರನ್ನು ಇದೀಗ ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಮೇಲ್ವಿಚಾರಣೆ ವೇಳೆ ಶುಕ್ರವಾರ ಬೆಳಗ್ಗೆ ಆರು ಜನರಲ್ಲಿ ಕೋವಿಡ್ ಪಾಸಿಟಿವ್ ದೃಢವಾಗಿದೆ. ಅವರಿಗೆ ಇದೀಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನು ಒದಿ : https://cnewstv.in/?p=7397
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv