Cnewstv.in / 07.01.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ವೀಕೆಂಡ್ ಕರ್ಫ್ಯೂ : ರಾತ್ರಿಯಿಂದ ಮದ್ಯ ಮಾರಾಟ ಬಂದ್
ಬೆಂಗಳೂರು : ಮಧ್ಯ ಪ್ರಿಯರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ. ವೀಕೆಂಡ್ ಕರ್ಫ್ಯೂ ವೇಳೆ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ವೀಕೆಂಡ್ ಕರ್ಫ್ಯೂ ವೇಳೆ ಬಾರ್ , ಪಬ್ ಗಳನ್ನು ತೆರೆಯುವ ಹಾಗಿಲ್ಲ ಎಂದು ಸರಕಾರ ಕಟ್ಟು ನಿಟ್ಟಿನ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ವಾರಾಂತ್ಯದ ಕರ್ಫ್ಯೂ ವೇಳೆ ಬಾರ್, ಪಬ್ ಮತ್ತು ರೆಸಾರ್ಟ್ ಗಳನ್ನು ತೆರೆಯದಂತೆ ಆಯಾ ವೃತ್ತದ ಪಿ ಎಸ್ ಐ ಗಳು ಜವಾಬ್ದಾರಿ ವಹಿಸಬೇಕು. ಆದೇಶ ಉಲ್ಲಂಘನೆಯಾಗಲು ಅವಕಾಶ ನೀಡಬಾರದು ಎಂದು ಸರಕಾರ ಪೊಲೀಸರಿಗೆ ಸೂಚಿಸಿದೆ.
ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 05 ಗಂಟೆಯ ವರೆಗೆ ಬಾರ್ , ಪಬ್ ಗಳನ್ನು ಮುಚ್ಚಿಸಲು ಆದೇಶ ನೀಡಲಾಗಿದ್ದು, ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಉಳಿದ ದಿನಗಳಲ್ಲಿ ಬಾರ್ ಗಳಲ್ಲಿ ಕುಳಿತುಕೊಳ್ಳುವ ಸ್ಥಳಗಳಲ್ಲಿ ಶೇ 50 ಮಾತ್ರ ಅವಕಾಶವಿದೆ. 6 ಅಡಿ ಅಂತರ ಕಾಪಾಡಿಕೊಳ್ಳಬೇಕು. ನೌಕರರು ಕಡ್ಡಾಯವಾಗಿ ಮಾಸ್ಕ್ ಹಾಗು ಗ್ಲೌಸ್ ಹಾಕಿಕೊಳ್ಳಬೇಕು. ಹೋಟೆಲ್ ಗಳಲ್ಲಿ ಪಾರ್ಸೆಲ್ ಮತ್ತು ಹೋಮ್ ಡೆಲಿವರಿಗೆ ಅವಕಾಶ ನೀಡಲಾಗಿದೆ.
ಇದನ್ನು ಒದಿ : https://cnewstv.in/?p=7385
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv