Breaking News

ಓಂಶಕ್ತಿ ಯಾತ್ರೆ ಮುಗಿಸಿ ಬಂದವರಿಗೆ ಕೋವಿಡ್ ಟೆಸ್ಟ್. 7 ದಿನ ಕ್ವಾರಂಟೈನ್ ಗೆ ಜಿಲ್ಲಾಡಳಿತದ ಸೂಚನೆ.

Cnewstv.in / 05.01.2022 / ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಓಂಶಕ್ತಿ ಯಾತ್ರೆ ಮುಗಿಸಿ ಬಂದವರಿಗೆ ಕೋವಿಡ್ ಟೆಸ್ಟ್, 7 ದಿನ ಕ್ವಾರಂಟೈನ್ ಗೆ ಜಿಲ್ಲಾಡಳಿತದ ಸೂಚನೆ.

ಶಿವಮೊಗ್ಗ : ಪ್ರತಿವರ್ಷದಂತೆ ಈ ವರ್ಷವೂ ಸಹ ಓಂಶಕ್ತಿ ಯಾತ್ರೆಗೆ ನಗರದಿಂದ ಅನೇಕರು ತೆರಳಿದ್ದರು.ಡಿಸೆಂಬರ್ 31ರಂದು ನಗರದಿಂದ ಓಂ ಶಕ್ತಿ ಯಾತ್ರೆಗೆ ತೆರಳಿದ್ದವರು ಇಂದು ಬೆಳಿಗ್ಗೆ ವಾಪಸಾಗಿದ್ದಾರೆ.

ಓಂಶಕ್ತಿ ಯಾತ್ರೆಗೆ ತೆರಳಿ ಹಿಂತಿರುಗಿರುವವರೆಗೆ ಸಹ್ಯಾದ್ರಿ ಕಾಲೇಜಿನ ಹತ್ತಿರ ಸ್ಕ್ರೀನಿಂಗ್ ಟೆಸ್ಟ್ ಮಾಡಲಾಯಿತು. ಸುಮಾರು 82 ಬಸ್ಸುಗಳಲ್ಲಿ 4 ಸಾವಿರಕ್ಕೂ ಅಧಿಕ ಮಂದಿ ತಮಿಳುನಾಡಿನ ಓಂ ಶಕ್ತಿ ಯಾತ್ರೆಗೆ ತೆರಳಿದ್ದರು. ಮೈಸೂರು, ನಂಜನಗೂಡು, ತಿರುವಣ್ಣಾಮಲೈ, ಕುಂಭಕೋಣಂ ಸೇರಿದಂತೆ ಹಲವಾರು ತೀರ್ಥಕ್ಷೇತ್ರಗಳಿಗೆ ತೆರಳಿದ್ದರು.‌

https://youtu.be/fyR81ZQAzN4

ನಗರಕ್ಕೆ ಆಗಮಿಸಿದ ಇವರೆಲ್ಲರಿಗೂ ಸಹ ಆರಂಭದಲ್ಲೇ ಸಹ್ಯಾದಿ ಕಾಲೇಜ್ ಬಳಿ ತಡೆದು ತಪಾಸಣೆ ನಡೆಸಲಾಯಿತು. ಪ್ರತಿಯೊಬ್ಬರನ್ನು ಪರೀಕ್ಷೆಗೆ ಒಳಪಡಿಸಲಾಯಿತು. RTPCR ಪರೀಕ್ಷೆ ನಡೆಸಲಾಗುತ್ತಿದೆ.‌ ಯಾತ್ರೆಯಿಂದ ಮರಳಿದ ಪ್ರತಿಯೊಬ್ಬರಿಗೂ 7 ದಿನಗಳ ಕಾಲ ಹೋಂಕ್ವಾರಂಟೈನ್ ಮಾಡಲಾಗುತ್ತಿದೆ.

ಮಂಡ್ಯದಲ್ಲಿ ಓಂ ಶಕ್ತಿ ಯಾತ್ರೆಗೆ ಹೋಗಿ ಮರಳಿ ಬಂದಿದ್ದ 30 ಜನರಿಗೆ ಕೊರೋನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುಂಜಾಗ್ರತ ಕ್ರಮವಾಗಿ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಂಡಿದೆ.

ಇದನ್ನು ಒದಿ : https://cnewstv.in/?p=7353

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*