Breaking News

ಸೇತುವೆ ಮೇಲಿಂದ ತುಂಗಾ ನದಿಗೆ ಹಾರಿದ ಯುವಕ

Cnewstv.in / 04.01.2022 / ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಸೇತುವೆ ಮೇಲಿಂದ ತುಂಗಾ ನದಿಗೆ ಹಾರಿದ ಯುವಕ

ಶಿವಮೊಗ್ಗ : ಯುವಕನೊಬ್ಬನು ಶಿವಮೊಗ್ಗದ ಹಳೇ ಸೇತುವೆ ಮೇಲಿನಿಂದ ತುಂಗಾ ನದಿಗೆ ಹಾರಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಇಂದು ಬೆಳಗ್ಗೆ ಯುವಕನು ಸೇತುವೆ ಮೇಲಿನಿಂದ ಜಿಗಿದು ನೀರಿನಲ್ಲಿ ಮುಳುಗುವುದನ್ನು ಗಮನಿಸಿದ ಸ್ಥಳೀಯರು ಯುವಕನನ್ನು ರಕ್ಷಣೆ ಮಾಡಿದ್ದಾರೆ.

ರೈಲ್ವೆ ಸೇತುವೆ ಹತ್ತಿರ ಯುವಕ ನೀರಿನಲ್ಲಿ ಮುಳುಗಿ ಹೋಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ರಕ್ಷಿಸಿದ್ದಾರೆ.‌ ಯುವಕನನ್ನ ರಕ್ಷಣೆ ಮಾಡುವ ದೃಶ್ಯವನ್ನು ಸೇತುವೆ ಮೇಲೆ ನಿಂತು ನೂರಾರು ಜನರು ನೋಡುತ್ತಿದ್ದರು. ಇದರಿಂದ ಕೆಲಕಾಲ ಸೇತುವೆ ಮೇಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಈ ಘಟನೆ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಯುವಕನನ್ನು ರಕ್ಷಿಸಿದ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನು ಒದಿ : https://cnewstv.in/?p=7345

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*