Cnewstv.in / 03.01.2022 / ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಸರ್ಕಾರಿ ಶಾಲೆಗಳು ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಾಲಿನ ಜೊತೆಗೆ ಒಂದು ಬ್ರೆಡ್ ನ್ನು ನೀಡಿ.
ಶಿವಮೊಗ್ಗ : ಸರ್ಕಾರಿ ಶಾಲೆಗಳು ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಾಲಿನ ಜೊತೆಗೆ ಒಂದು ಬ್ರೆಡ್ ನ್ನು ನೀಡಬೇಕು ಎಂದು ಸಂಯುಕ್ತ ಜನಾತದಳದ ಶಶಿಕುಮಾರ್ ಎಸ್.ಗೌಡ ರವರು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿರುವ ಸರ್ಕಾರಿ ಪ್ರಾಥಮಿಕ ಮತ್ತು ಅನುದಾನಿತ ಶಾಲೆಯಲ್ಲಿ ಓದುತ್ತಿರುವ ಪ್ರತಿ ಮಕ್ಕಳಿಗೆ ಈಗ
ನೀಡುತ್ತಿರುವ ಹಾಲಿನ ಜೊತೆಗೆ ಒಂದು ಬನ್ ನೀಡಬೇಕು ಎನ್ನುವ ವಿಚಾರ ಕ್ಕೆ ಸಂಬಂಧ ಪಟ್ಟಂತೆ ಕಳೆದ 2 ವರ್ಷಗಳಿಂದ ಕೊರೊನಾದಿಂದ ಜನತೆ ಕೆಲಸವಿಲ್ಲದೇ ಸಂಕಷ್ಟದಲ್ಲಿರುವುದು ಹಾಗು ಅಡುಗೆ ಅನಿಲ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಬಡ ಕುಟುಂಬಗಳಿಗೆ ಜೀವನ ನಿರ್ವಹಣೆ ಕಷ್ಟವಾಗಿರುತ್ತದೆ.
ಸರ್ಕಾರಿ ಶಾಲೆಗಳಲ್ಲಿ ಹಾಗೂ ಖಾಸಗಿ ಅನುದಾನಿತ ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ಸಮಯದಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಜಾಗರೂಕತೆಯಿಂದ ಬಳಸುವ ಬಗ್ಗೆ ಹಾಗು ಅಡುಗೆ ತಯಾರು ಮಾಡಬೇಕಾದ ಸಂದರ್ಭ ದಲ್ಲಿ ಸ್ವಚ್ಛತೆಯಿಂದ ಹಾಗು ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಉಪಯೋಗಿಸಿ ವಿದ್ಯಾರ್ಥಿಗಳಿಗೆ ನೀಡಬೇಕು
ಭದ್ರಾವತಿ ತಾಲೂಕಿನ ಜಂಕ್ಷನ್ ಸರ್ಕಾರೀ ಶಾಲೆಯಲ್ಲಿ ಕಳೆದ ತಿಂಗಳು ಬಿಸಿಯೂಟ ತಯಾರಿಸುವ ಸಂದರ್ಭದಲ್ಲಿ ಗ್ಯಾಸ್ ಸಿಲಿಂಡರ್ ಹೊತ್ತಿಕೊಂಡು ಕೆಲ ಕಾಲ ಸ್ಥಳೀಯರು ಹಾಗು ವಿದ್ಯಾರ್ಥಿಗಳು ಆತಂಕ ಗೊಂಡ ಘಟನೆ ನಡೆದಿರುತ್ತದೆ ನಂತರ ಭದ್ರಾವತಿ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಸಮಸ್ಯೆ ಬಗೆ ಹರಿಸುತ್ತಾರೆ ಮಾನ್ಯರಾದ ತಾವುಗಳು ಮುಂದಿನ ದಿನದಲ್ಲಿ ಈ ರೀತಿಯ ಘಟನೆ ಮರುಕಳಿಸದಂತ ಹಾಗು ಸಂಬಂಧ ಪಟ್ಟ ಇಲಾಖೆ ಮುಖ್ಯಸ್ಥರಿಗೆ ಸೂಚಿಸಬೇಕು ಹಾಗು ಅದೇರೀತಿ ಮಾನ್ಯರಾದ ತಾವುಗಳು ಸಂಬಂಧ ಪಟ್ಟ ಅಧಿಕಾರಿಗಳಲ್ಲಿ ಬಿಸಿಯೂಟ ತಯಾರಿಸುವ ಸಂದರ್ಭದಲ್ಲಿ ಸಿಲಿಂಡರ್ ಬಗ್ಗೆ ಜಾಗ್ರತೆ ವಹಿಸಿ ಸ್ವಚ್ಛತೆಯಿಂದ ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಉಪಯೋಗಿಸಿ ಅಡುಗೆ ಮಾಡಿ ವಿದ್ಯಾರ್ಥಿಗಳಿಗೆ ನೀಡುವಂತ ಹಾಗು ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಈಗ ನೀಡುತ್ತಿರುವ ಬಿಸಿ ಹಾಲಿನ ಜೊತೆಗೆ ಒಂದು ಬನ್ ನೀಡಬೇಕೆಂದು ವಿನಂತಿಸಿದರು.
ಇದನ್ನು ಒದಿ : https://cnewstv.in/?p=7328
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv