Cnewstv.in / 03.01.2022 / ಇಸ್ರೇಲ್/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಕೊರೊನಾ, ಒಮಿಕ್ರಾನ್ ಆಯ್ತು, ಇದೀಗ “ಫ್ಲೊರೋನಾ” ಮೊದಲ ಪ್ರಕರಣ ವರದಿ.
ಇಸ್ರೇಲ್ : ಕೊರೊನಾ ಸೋಂಕಿನಿಂದ ಇಡೀ ದೇಶವೇ ತತ್ತರಿಸಿ ಹೋಗಿತ್ತು, ಇದೀಗ ಅದರ ರೂಪಾಂತರಿ ವೈರಸ್ ಒಮಿಕ್ರಾನ್ ವೇಗವಾಗಿ ದೇಶಾದ್ಯಂತ ಹರಡುತ್ತಿದ್ದು ಮತ್ತೊಂದು ಆತಂಕವನ್ನು ಸೃಷ್ಟಿಸುತ್ತಿದೆ. ಇದರ ಬೆನ್ನಲ್ಲೇ ಇಸ್ರೇಲ್ ನಲ್ಲಿ ಫೂರೋನಾ ಪ್ರಕರಣವು ಪತ್ತೆಯಾದ ಬಗ್ಗೆ ಅರಬ್ ನ್ಯೂಸ್ ವರದಿ ಮಾಡಿದೆ.
ಇಸ್ರೇಲ್ ನಾ ರಾಬಿನ್ ಮೆಡಿಕಲ್ ಸೆಂಟರ್ ನಲ್ಲಿ ಗರ್ಭಿಣಿ ಮಹಿಳೆಯೊಬ್ಬಳು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು, ಈ ವೇಳೆ ಆಕೆಗೆ ಫ್ಲೂರೋನಾ ಸೋಂಕು ತಗುಲಿರುವುದು ಧೃಡಪಟ್ಟಿದೆ.
ಕೊರೊನಾ (covid 19) ಹಾಗೂ ಶೀತ ಜ್ವರ ( influenza) ಎರಡರ ಡಬಲ್ ಸೋಂಕಿನಿಂದ ಫ್ಲೋರೋನಾ ಸಮಸ್ಯೆ ಉಂಟಾಗುತ್ತಿದೆ. ಜ್ವರ ಮತ್ತು ಕೊರೊನಾ ಏಕಕಾಲಕ್ಕೆ ಸಂಭವಿಸುವುದನ್ನು ಈ ಹೆಸರಿನಿಂದ ಗುರುತಿಸಲಾಗುತ್ತಿದೆ. ಹಾಗೂ ಸೋಂಕಿತ ಮಹಿಳೆ ಕೊರೊನಾ ಲಸಿಕೆಯನ್ನು ಪಡೆದಿರಲಿಲ್ಲ.
ಇತ್ತೀಚಿನ ದಿನಗಳಲ್ಲಿ ಫ್ಲೊರೋನಾ ಪ್ರಕರಣಗಳು ಇಸ್ರೇಲ್ ನಲ್ಲಿ ಹೆಚ್ಚುತ್ತಿದ್ದು, ದಿನವೊಂದಕ್ಕೆ ಸುಮಾರು 4000 ರಿಂದ 5000 ದ ವರೆಗೆ ಪ್ರಕರಣಗಳು ದಾಖಲಾಗಲು ಆರಂಭಗೊಂಡಿದೆ. ಈ ಬಗ್ಗೆ ವೈದ್ಯರು ಅಧ್ಯಯನ ನಡೆಸಿದ್ದು, ಇದು ಹೊಸ ರೂಪಾಂತರಿ ಯಲ್ಲ ಎಂದು ಖಚಿತವಾಗಿದೆ.
ಏಕಕಾಲಕ್ಕೆ ಎರಡು ವೈರಾಣುಗಳು ಮನುಷ್ಯನ ದೇಹಕ್ಕೆ ಸೋಂಕು ಮಾಡುತ್ತಿರುವುದರಿಂದ ಫ್ಲೊರೋನಾ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ.
ಕೊರೊನಾ ವಿರುದ್ದ ಪರಿಣಾಮಕಾರಿಯಾಗಿ ಹೋರಾಟಕ್ಕೆ ಇಸ್ರೇಲ್ ಮುಂದಾಗಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವಂತಹ ವ್ಯಕ್ತಿಗಳಿಗೆ ಮೂರು ಮತ್ತು ನಾಲ್ಕನೆ ಡೇಸ್ ಲಸಿಕೆ ನೀಡಲು ಮುಂದಾಗಿದೆ.
ಇದನ್ನು ಒದಿ : https://cnewstv.in/?p=7321
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments