Cnewstv.in / 31.12.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
New Year : ಕೇಕ್ ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್
ಶಿವಮೊಗ್ಗ : ಜಿಲ್ಲೆಯಾದ್ಯಂತ ಹೊಸವರ್ಷವನ್ನು ಸ್ವಾಗತಿಸಲು ಜನರು ತಯಾರಾಗಿದ್ದಾರೆ.
ಇಂದು ನಗರದ ಎಲ್ಲಾ ಬೇಕರಿಗಳು ಫುಲ್. ಹೊಸವರ್ಷ ಸಂಭ್ರಮಾಚರಣೆಗೆ ಕೇಕ್ ಡಿಮಾಂಡ್ ಕ್ರಿಯೇಟ್ ಮಾಡಿದೆ. ಎಲ್ಲಾ ಬೇಕರಿಯ ಮುಂದೆ ಜನರು ಕೇಕ್ ಗಾಗಿ ಸಾಲುಗಟ್ಟಿ ನಿಂತಿದ್ದಾರೆ.
ನೈಟ್ ಕರ್ಫ್ಯೂ ವಿಧಿಸಿರುವ ಹಿನ್ನೆಲೆಯಲ್ಲಿ ಸಂಜೆಯಿಂದಲೇ ಎಲ್ಲಾ ಬೇಕರಿಗಳ ಮುಂದೆ ಜನ ಜಮಾಯಿಸಿದ್ದಾರೆ. ಎಲ್ಲಾ ಬೇಕರಿಗಳಲ್ಲಿ ಕೇಕ್ ಗಳನ್ನು ನೀಡುವುದಕ್ಕಾಗಿಯೇ ಸಪರೇಟ್ ಕೌಂಟರ್ ಮಾಡಿದ್ದಾರೆ.
ಕೊರೊನಾ ಮರೆತ ಜನರು.
ರಾಜ್ಯಾದ್ಯಂತ ಕೊರೊನಾ ರೂಪಾಂತರಿ ಒಮಿಕ್ರಾನ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರದ ಡೇಂಜರ್ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಕೂಡ ಇದೆ. ಈ ಹಿನ್ನಲೆಯಲ್ಲಿ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗೃತ ವಾಗಿ ನೈಟ್ ಕರ್ಫ್ಯೂ ಹಾಕಲಾಗಿದೆ. ಆದರೂ ಸಹ ಜನರು ಕೊರೊನಾ ನಿಯಮಗಳನ್ನು ಮರೆತು ಕೇಕ್ ಗಾಗಿ ಮುಗಿಬಿದ್ದಿದ್ದಾರೆ.
ಒಟ್ಟಿನಲ್ಲಿ ಜನರು ಹೊಸ ವರ್ಷದ ಸಂಭ್ರಮದ ನಡುವೆ ಕೊರೊನಾವನ್ನು ಮರೆಯುತ್ತಿದ್ದಾರೆ.
ಇದನ್ನು ಒದಿ : https://cnewstv.in/?p=7296
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments