Cnewstv.in / 30.12.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಗುಂಡಿ ಅಗೆಯುವುದು, ಕಂಬ ಹತ್ತದಂತೆ, ಜಾನುವಾರುಗಳನ್ನು ಕಂಬ/ಗೈ ಗಳಿಗೆ ಕಟ್ಟದಂತೆ ಈ ಭಾಗದ ಸಾರ್ವಜನಿಕರಿಗೆ
ಎಚ್ಚರಿಕೆ.
ಶಿವಮೊಗ್ಗ : ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಹಾಲಿ ಅಳವಡಿಸಿರುವು ಭೂಗತ ಕೇಬಲ್ ಚೇತನಗೊಳ್ಳಲಿರುವುದರಿಂದ ಈ ಕೆಳಕಂಡ ಪ್ರದೇಶಗಳಲ್ಲಿ ಸಾರ್ವಜನಿಕರು ಮೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸದೇ ಗುಂಡಿ ಅಗೆಯಬಾರದು, ಜಾನುವಾರುಗಳನ್ನು ಕಂಬ/ಗೈ ಗಳಿಗೆ ಕಟ್ಟಬಾರದು ಹಾಗೂ ಕಂಬಗಳನ್ನು ಹತ್ತಬಾರದು ಎಂದು ಎಚ್ಚರಿಕೆ ನೀಡಲಾಗಿದೆ.
ಶಿವಮೊಗ್ಗದಿಂದ ಸಾಗರ ಕಡೆಗೆ ಹೋಗುವ ನ್ಯಾಷನಲ್ ಹೈವೇ ಎನ್‍ಹೆಚ್-206 ರಲ್ಲಿ ಬಲಭಾಗದಿಂದ 03 ಸಂಖ್ಯೆ 400 ಸ್ಕ್ವೇ.ಎಂ.ಎಂ ಭೂಗತ ಕೇಬಲ್ ಅಳವಡಿಸಿರುತ್ತಾರೆ. ಈ ಮಾರ್ಗವು ಚೇತನ್ ಹೇರ್ ಕಟ್ಟಿಂಗ್ ಶಾಪಿನವರೆಗೆ ಬಲಭಾಗದವರೆಗೆ ಇದ್ದು ಅಲ್ಲಿಂದ ಎಡಭಾಗಕ್ಕೆ ಹೆಚ್‍ಡಿಡಿ ಮುಖಾಂತರ ಕೇಬಲ್‍ನ್ನು ರಾಷ್ಟ್ರೀಯ ಹೆದ್ದಾರಿಯನ್ನು ಕ್ರಾಸ್ ಮಾಡಿ ಕಾಸ್ಮೋ ಕ್ಲಬ್ ಮುಂಭಾಗದಿಂದ ಪೆಸೆಟ್ ಕಾಲೇಜ್‍ವರೆಗು ಎಡಭಾಗದಲ್ಲಿಯೇ ಅಳವಡಿಸಿ, ಪೆಸೆಟ್ ಕಾಲೇಜ್ ಮುಂಭಾಗದಿಂದ ಎಡದಿಂದ ಬಲಭಾಗಕ್ಕೆ ಅಳವಡಿಸಿ ಮುದ್ದಿನಕೊಪ್ಪ ಕ್ರಾಸ್‍ವರೆಗೂ ಬಲಭಾಗದಲ್ಲಿಯೇ ಮುಂದುವರೆದು ಮುದ್ದಿನಕೊಪ್ಪ ಕ್ರಾಸ್‍ನಿಂದ ಮುದ್ದಿನಕೊಪ್ಪ ಕೆರೆವರೆಗೆ ಓವರ್‍ಹೆಡ್ ಮಾರ್ಗ ರಚಿಸಲಾಗಿದೆ.
ಮುದ್ದಿನಕೊಪ್ಪ ಗ್ರಾಮದ ಕೆರೆಯಿಂದ ಸಿದ್ಲಿಪುರ ಕ್ರಾಸ್‍ವರೆಗೂ ರಸ್ತೆಯ ಬಲಭಾಗದಲ್ಲೇ 02 ಸಂಖ್ಯೆ 400 ಸ್ಕ್ವೇ.ಎಂ.ಎಂ ಭೂಗತ ಕೇಬಲ್ ಅಳವಡಿಸಲಾಗಿದ್ದು, ಈ ಪ್ರದೇಶಗಳಲ್ಲಿ ಸಾರ್ವಜನಿಕರು ಮೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸದೇ ಗುಂಡಿ ಅಗೆಯುವುದನ್ನು ಮಾಡಬಾರದು. ಮತ್ತು ಸಿದ್ಲಿಪುರ ಕ್ರಾಸ್‍ನಿಂದ ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದ ಹತ್ತಿರ ಇರುವ ರೈಲ್ವೇ ಕ್ರಾಸ್‍ವರೆಗೆ ಓವರ್‍ಹೆಡ್ ಮಾರ್ಗ ರಚಿಸಿದ್ದು, ರೈಲ್ವೇ ಕ್ರಾಸ್‍ನ ಇನ್ನೊಂದು ಬದಿಯಲ್ಲಿರುವ ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದಲ್ಲಿ ಅಳವಡಿಸಿರುವ ಸುಮಾರು 30 ಪರಿವರ್ತಕಗಳನ್ನು ಚಾಲನೆಗೊಳಿಸಲಾಗಿದ್ದು, ಈ ಜಾಗದಲ್ಲಿ ಸಾರ್ವಜನಿಕರು ಜಾನುವಾರುಗಳನ್ನು ಕಂಬ/ಗೈ ಗಳಿಗೆ ಕಟ್ಟಬಾರದು ಹಾಗೂ ಸಾರ್ವಜನಿಕರು ಕಂಬವನ್ನು ಹತ್ತಬಾರದೆಂದು ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್, ಕಾ ಮತ್ತು ಪಾ ಉಪವಿಭಾಗ, ಮೆಸ್ಕಾಂ, ಕುಂಸಿ ಇವರು ಕೋರಿದ್ದಾರೆ.
ಇದನ್ನು ಒದಿ : https://cnewstv.in/?p=7275
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments