Cnewstv.in / 27.12.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಅಬಕಾರಿ ಡಿಸಿ ಕಚೇರಿ ಮುಂಭಾಗ ಏಕಾಂಗಿ ಹೋರಾ
ಶಿವಮೊಗ್ಗ : ಅಬಕಾರಿ ನಿಯಮಗಳನ್ನು ಪಾಲನೆ ಮಾಡದಿರುವ ಭದ್ರಾವತಿ ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ದ ಸಂಯುಕ್ತ ಜನತಾದಳದ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್ ಗೌಡ ರವರು ಏಕಾಂಗಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ.
ಸರ್ವೋಚ್ಚ ನ್ಯಾಯಲಯದ ಆದೇಶದ ಪ್ರಕಾರ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಪಕ್ಕದ 500 ಮೀಟರ್ ವ್ಯಾಪ್ತಿಯಲ್ಲಿರುವ ಮಧ್ಯದಂಗಡಿಗಳನ್ನು ತೆರವುಗೊಳಿಸುವಂತೆ 2016-2021ರಲ್ಲಿ ಆದೇಶ ನೀಡಿರುತ್ತದೆ, ಆದರೂ ಕೂಡ ಅಬಕಾರಿ ಇಲಾಖೆ ಅಂತಹ ಮಧ್ಯದಂಗಡಿಗಳಿಂದ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲಾ, ಅದೇ ರೀತಿ ಭದ್ರಾವತಿ ಡೈರಿ ಸರ್ಕಲ್‌ನಲ್ಲಿ 2 ಮಧ್ಯದಂಗಡಿಗಳಿದ್ದು ಆ ಮಧ್ಯದಂಗಡಿಗಳೂ ಕೂಡ ಹೆದ್ದಾರಿ ಪಕ್ಕದ 500 ಮೀಟರ್ ವ್ಯಾಪ್ತಿಯಲ್ಲಿದೆ. ಈ ಮಧ್ಯದಂಗಡಿಗಳಲ್ಲಿ ಮಧ್ಯಪಾನ ಮಾಡಿ ಪದೇ ಪದೇ ಗಲಾಟೆ ಹೊಡಾದಾಟಗಳು ನಡೆದು ಸಂಬಂದ ಪಟ್ಟವರ ವಿರುದ್ಧ ಕ್ರಿಮಿನಲ್ ಕೇಸ್ ಭದ್ರಾವತಿ ನ್ಯೂಟೌನ್ ಠಾಣೆಯಲ್ಲಿ ದಾಖಲಾಗಿದೆ.
ಮಧ್ಯದಂಗಡಿ ಮುಂದೆ ಅಕ್ಕ ಪಕ್ಕ ಶಾಂತಿ ಭಂಗವಾಗುವಂತ ಘಟನೆ ಸಂಬವಿಸಿದರೆ ಅಂತಹ ಮಧ್ಯದಂಗಡಿಗಳನ್ನು ಸ್ಥಳಾಂತರ ಮಾಡುವ ಅಧಿಕಾರ ಆ ಜಿಲ್ಲೆಯ ಅಬಕಾರಿ ಆಯುಕ್ತರಿಗೆ ಇರುತ್ತದೆ. ಕಳೆದ 6 ತಿಂಗಳಿಂದ ಭದ್ರಾವತಿ ಅಬಕಾರಿ ಇನ್ಸ್‌ಪೆಕ್ಟರ್ ರವರಿಗೆ ಹಲವಾರು ಬಾರಿ ಧರಣಿ ಸತ್ಯಾಗ್ರಹ ನಡೆಸಿ ಮಧ್ಯದಂಗಡಿ ವಿರುದ್ದ ಮನವಿ ಮಾಡಿದರು ಕೂಡ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ರಾಷ್ಟ್ರೀಯ ಹೆದ್ದಾರಿ ಸಚಿವಾಲಯದ ಪ್ರಕಾರ ದೇಶದಲ್ಲಿ 2019 ರಿಂದ ಇಲ್ಲಿಯವರೆಗೂ 4, ಲಕ್ಷದ 50 ಸಾವಿರ ಅಪಘಾತಗಳ ವರದಿಯಾಗಿದ್ದು ಅದರಲ್ಲಿ 1 ಲಕ್ಷದ 55 ಸಾವಿರ ಮಂದಿ ಮೃತಪಟ್ಟಿರುತ್ತಾರೆ, ಅವುಗಳಲ್ಲಿ ಮಧ್ಯಪಾನ ಮಾಡಿ ವಾಹನ ಅಪಘಾತದಿಂದ ಸಾವನ್ನಪ್ಪಿರುವವರ ಸಂಖ್ಯೆ 1 ಲಕ್ಷ ಮತ್ತು 2 ಲಕ್ಷ ಮಂದಿ. ಅಪಾಘತದಿಂದ ಶೇ. 75 ರಷ್ಟು ಅಂಗವೈಕಲ್ಯ ಹೊಂದಿರುತ್ತಾರೆಂದು ರಾಷ್ಟ್ರೀಯ ಹೆದ್ದಾರಿ ಸಚಿವಾಲಯ ಮಾನ್ಯ ಸರ್ವೋಚ್ಚ ನ್ಯಾಯಲಯಕ್ಕೆ
ಮಾಹಿತಿ ನೀಡಿರುತ್ತದೆ.
ಅಬಕಾರಿ ಇಲಾಖೆಗೆ ಸಂಬಂಧಪಟ್ಟಂತೆ ಹಲವು ದೂರುಗಳನ್ನು 6 ತಿಂಗಳಿಂದ ನೀಡಿದರು ಸಹ ಯಾವುದೇ ಕ್ರಮ ತೆಗೆದುಕೊಳ್ಳದೆ ಇರುವ ಭದ್ರಾವತಿ ತಾಲ್ಲೂಕಿನ ಅಬಕಾರಿ ಇಲಾಖೆಯ ಇನ್ಸ್‌ಪೆಕ್ಟರ್ ಸೇರಿದಂತೆ ಎಲ್ಲಾ ಸಿಬ್ಬಂದಿಗಳನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕು, ಹಾಗೂ ಡೈರಿ ಸರ್ಕಲ್‌ನಲ್ಲಿರುವ 2 ಮಧ್ಯದಂಗಡಿಗಳು ಹಾಗೂ ಭದ್ರಾವತಿ ತಾಲ್ಲೂಕ್ಕಿನ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಯಲ್ಲಿರುವ ಮಧ್ಯದಂಗಡಿ ಬೇರೆಡೆಗೆ ಸ್ಥಳಾಂತರವಾಗುವವರೆಗೆ ಶಾಂತಿಯುತವಾಗಿ ನ್ಯಾಯ ಸಿಗುವವರೆಗೂ ಅರ್ನಿಧಿಷ್ಠವದಿ ಧರಣಿ ಸತ್ಯಾಗ್ರಹವನ್ನು ಅಬಕಾರಿ ಆಯುಕ್ತರ ಕಛೇರಿ ಎದುರು ನಡೆಸುವುದಾಗಿ ತಿಳಿಸಿದ್ದಾರೆ.
ಇದನ್ನು ಒದಿ : https://cnewstv.in/?p=7246
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments