Breaking News

ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ವಿರುದ್ದ ಚನ್ನಬಸಪ್ಪನವರ ಹೇಳಿಕೆಗೆ ಖಂಡನೀಯಾ : ಯಮುನಾ ರಂಗೇಗೌಡ

Cnewstv.in / 24.12.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಮಹಾನಗರ ಪಾಲಿಕೆಯ ಆಡಳಿತ ಪಕ್ಷದ ನಾಯಕರು ಎಸ್.ಎನ್.ಚನ್ನಬಸಪ್ಪ ರವರು ಸುದ್ದಿ
ಗೋಷ್ಠಿಯಲ್ಲಿ ಮಾತನಾಡಿ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಶ್ರೀಯುತ ಸಿದ್ದರಾಮಯ್ಯ ರವರನ್ನು
ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಶ್ರೀಯುತ ಡಿ.ಕೆ.ಶಿವಕುಮಾರ್ ರವರನ್ನು ಗಡಿ ಪಾರು ಮಾಡಬೇಕೆಂದು ಹೇಳಿಕೆ ನೀಡಿರುವುದನ್ನು ಶಿವಮೊಗ್ಗ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿಯಾದ ಯಮುನಾ ರಂಗೇಗೌಡ ಖಂಡಿಸಿದ್ದಾರೆ.

ಕೇವಲ ರಾಜಕಾರಣಕ್ಕಾಗಿ ಓಲೈಕೆಗಾಗಿ ಗೋಹತ್ಯೆ ಮತ್ತು ಹಿಂದುತ್ವದ ಪದಗಳನ್ನು ಬಳಸಿಕೊಳ್ಳುವ ಈ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲು ಭಾರತಿಯರನ್ನ ಆರ್ಥಿಕವಾಗಿ ಸಂಕಷ್ಟಕ್ಕೆ ದೂಡಿದ್ದಾರೆ ಹೊರತು ಕೊಟ್ಟಿರುವ
ಆಶ್ವಾಸನೆಗಳನ್ನು ಪೂರೈಸುವಲ್ಲಿ ವಿಫಲರಾಗಿದ್ದರೂ ಸಹ ಇಂತಹ ಬಾಲಿಷ ಹೇಳಿಕೆಯನ್ನು ಕೊಡುವಲ್ಲಿ ಸದಾ
ಮುಂದಿರುತ್ತಾರೆ.

ಕಾಂಗ್ರೆಸ್ ಪಕ್ಷ ಸರ್ವ ಧರ್ಮದ ಜನಾಂಗದ ಪರವಾಗಿ ಹಾಗೂ ಭಾರತದ ಅಭಿವೃದ್ದಿಗಾಗಿ ಸದಾ ಶ್ರಮಿಸಿರುವ ಪಕ್ಷ ಬಹುಶಃ ನಮ್ಮ ಶಿವಮೊಗ್ಗದ ಶಾಸಕರು ಹಾಗೂ ಸಚಿವರಾದಂತಹ ಈಶ್ವರಪ್ಪ ನವರು ಜಿಲ್ಲೆಯಲ್ಲಿಇರದ ಕಾರಣ ಮುಂದಿನ ದಿನಗಳಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದು ಹಾಸ್ಯಸ್ಪದವಾಗಿದೆ.

ಶಿವಮೊಗ್ಗ ಮಹಾನಗರ ಪಾಲಿಕೆಯ ಆಸ್ತಿಯಾದ ಶಿವಪ್ಪನಾಯಕ ಮಾರುಕಟ್ಟೆ (ಬ್ಯಾರಿಸ್‌ ಸಿಟಿ ಸೆಂಟರ್ ಮಾಲ್ ) ಅನ್ನು ಮುಸಲ್ಮಾನರು ಬೋಗ್ಯ ಪಡೆದಿರುವ ಈ ಕಟ್ಟಡವನ್ನ ಬಿಜೆಪಿ ಆಡಳಿತದಲ್ಲಿ ಮಾರಾಟ ಮಾಡಲು ಹೊರಟ ಇವರು ಮತಕ್ಕಾಗಿ ರಾಜಕಾರಣಕ್ಕಾಗಿ ಮಾತ್ರ ಹಿಂದುಗಳ ಪರವಾಗಿ ಇರುತ್ತಾರೆ ಎನ್ನುವುದು ಎಲ್ಲರಿಗು ತಿಳಿದಿರುವ ವಿಷಯ. ಇವರಿಂದ ಸಾಧ್ಯವಾದಲ್ಲಿ ಬಿಜೆಪಿ ಆಡಳಿತದಲ್ಲಿ ಈ ಶಿವಪ್ಪ ನಾಯಕ ಮಾರುಕಟ್ಟೆಯನ್ನು ಮಾರಾಟಮಾಡಲು ಮುಂದಾದವರ ವಿರುದ್ಧ ಕ್ರಮಕೈಗೊಳ್ಳಲಿ ಆನಂತರ ಹೇಳಿಕೊಳ್ಳುವಂತೆ ಇವರ ಡಬಲ್ ಇಂಜಿನ್ ಸರ್ಕಾರದಿಂದ ಹೇಳಿದಂತೆ ನಡೆದುಕೊಳ್ಳಲು ಸಾಧ್ಯವಾದರೆ ನಮ್ಮನಾಯಕರ ವಿಷಯದಲ್ಲಿ ಇವರು ಕೊಟ್ಟ ಹೇಳಿಕೆಯಂತೆ ಮಾಡಿ ತೋರಿಸಲಿ ಎಂದಿದ್ದಾರೆ.

ಇದನ್ನು ಒದಿ : https://cnewstv.in/?p=7220

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*