Breaking News

ಕಾನೂನು ವಿದ್ಯಾರ್ಥಿಗಳಿಂದ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ.

Cnewstv.in / 23.12.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಕಾನೂನು ವಿದ್ಯಾರ್ಥಿಗಳಿಂದ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ.

ಶಿವಮೊಗ್ಗ : ಸಿಬಿಅರ್ ನ್ಯಾಷನಲ್ ಕಾಲೇಜ್ ಆಫ್ ಲಾ ನ 5 ವರ್ಷದ 2ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಂದ ಪರೀಕ್ಷೆ ಬಹಿಷ್ಕಾರಿಸಿದ್ದಾರೆ. ಲಾ ಕಾಲೇಜಿನ 20 ವಿದ್ಯಾರ್ಥಿಗಳು ಇಂದು ಪರೀಕ್ಷೆ ವಿರೋಧಿಸಿ ಹಾಲ್ ಟಿಕೆಟ್ ಹರಿದು ಪ್ರತಿಭಟಿಸಿದರು‌.

ಹೌದು ಕಾನೂನು ವಿದ್ಯಾರ್ಥಿಗಳ ನ್ಯಾಯಕ್ಕಾಗಿ ಹೋರಾಟ ಇನ್ನೂ ಮುಂದುವರೆದಿದೆ. ಕಾನೂನು ವಿದ್ಯಾರ್ಥಿಗಳ ಪರೀಕ್ಷೆ ನಡೆಸುವುದರ ಬಗ್ಗೆ ಪ್ರಕರಣ ನ್ಯಾಯಾಲಯದಲ್ಲಿದ್ದು ಸಹ ಪರೀಕ್ಷೆ ನಡೆಸಲಾಗುತ್ತಿದೆ. ಇನ್ನು ಈ ಪ್ರಕರಣದ ತೀರ್ಪು ನೀಡಿಲ್ಲ ಅದಕ್ಕೂ ಮೊದಲೇ ಪರೀಕ್ಷೆ ನಡೆಸುತ್ತಿರುವುದನ್ನು ವಿದ್ಯಾರ್ಥಿಗಳು ವಿರೋಧಿಸಿದ್ದಾರೆ.

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ನಡುವೆ ಮಲತಾಯಿ ಧೋರಣೆಯನ್ನು ತೋರುತ್ತಿದೆ. ವಿಶ್ವವಿದ್ಯಾಲಯವು ಬಾರ್ ಕೌನ್ಸಿಲ್ ಆಫ್ ಇಂಡಿಯಾ, ಯುಸಿಜಿ ಆದೇಶವನ್ನು ಮೀರಿ ಪರೀಕ್ಷೆ ನಡೆಸುತ್ತಿತ್ತು. ಹಾಗೂ ಇಂದು ಮಧ್ಯಾಹ್ನ 2:30 ಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯ ತೀರ್ಪು ನೀಡುತಿತ್ತು ಈ ತೀರ್ಪು ಬರುವುದನ್ನು ಲೆಕ್ಕಿಸದೆ ಪರೀಕ್ಷೆ ನಡೆಸಿದ್ದನ್ನು ವಿದ್ಯಾರ್ಥಿಗಳು ಖಂಡಿಸಿ ಪ್ರವೇಶ ಪತ್ರವನ್ನು ಹರಿಯುವ ಮೂಲಕ ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘದ ಸಿಎಂ ಚಿನ್ಮಯ್,ನಂದೀಶ್,ದುಷ್ಯಂತ,ರಶ್ಮಿ,ಯಶಸ್ವಿನಿ,ಮಾನಸ, ಗೌಮ್ ಹಾಗೂ ಹಲವು ವಿದ್ಯಾರ್ಥಿಗಳು ಉಪಸ್ಥಿತಿ ಇದ್ದರು.

ಇದನ್ನು ಒದಿ : https://cnewstv.in/?p=7211

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*