Cnewstv.in / 22.12.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ನಗರದ ಹಲವು ಲಾಡ್ಜ್ ಗಳಲ್ಲಿ ಪೊಲೀಸರಿಂದ ದಿಢೀರ್ ತಪಾಸಣೆ.
ಶಿವಮೊಗ್ಗ : ನಗರದ ವಿವಿಧ ಲಾಡ್ಜ್ ಗಳಲ್ಲಿ ಪೊಲೀಸರು ಇಂದು ದಿಢೀರ್ ತಪಾಸಣೆ ನಡೆಸಿದ್ದಾರೆ.
ಅಕ್ರಮ ಹಾಗೂ ಅನೈತಿಕ ಚಟುವಟಿಕೆಗಳು ನಗರದ ಲಾಡ್ಜ್ ಗಳಲ್ಲಿ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳ ಆದೇಶದ ಮೇರೆಗೆ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ.
ಪೊಲೀಸರು ಇಂದು ಸಂಜೆ ಲಾಡ್ಜ್ ಗಳಿಗೆ ಭೇಟಿ ನೀಡಿ ಸರ್ಕಾರದ ಗೈಡ್ಲೈನ್ಸ್ ಪಾಲನೆ ಮಾಡುತ್ತಿದ್ದಾರಾ ಎಂದು ತಪಾಸಣೆ ನಡೆಸಿದ್ದಾರೆ. ಲಾಡ್ಜ್ ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾ, ರಿಜಿಸ್ಟರ್ ಬುಕ್ ಸೇರಿದಂತೆ ಅನೇಕ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಬಸ್ಟಾಂಡ್ ಸುತ್ತಮುತ್ತಲಿನ ಲಾಡ್ಜ್, ಶ್ರೀನಿಧಿ ಕಂಫರ್ಟ್ಸ್, ಲಕ್ಷ್ಮಿ ಪ್ಯಾಲೇಸ್, ಸಾಯಿ ಇಂಟರ್ನ್ಯಾಷನಲ್, ಹರ್ಷ ದಿ ಫಾರ್ಮ್, ಕಿಮ್ಮನೆ ಗರ್ಲ್ಸ್ ಸೇರಿದಂತೆ ಹಲವು ಲಾಡ್ಜ್ ಗಳನ್ನು ಚೆಕ್ ಮಾಡಲಾಗಿದೆ.
ಇದನ್ನು ಒದಿ : https://cnewstv.in/?p=7201
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv