Cnewstv.in / 22.12.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಮಲೆನಾಡಿನ ಉದಯೋನ್ಮುಖ ಪ್ರತಿಭೆ ಕುಮಾರಿ ನಿತ್ಯಶ್ರೀ
ಶಿವಮೊಗ್ಗ : ಮಲೆನಾಡಿನ ಉದಯೋನ್ಮುಖ ಪ್ರತಿಭೆ ಕುಮಾರಿ ನಿತ್ಯಶ್ರೀ. ಎಂ.ಎ. ಸ್ನಾತಕೋತ್ತರ ಪದವೀಧರೆ ಕು. ನಿತ್ಯಶ್ರೀಗೆ ಬಾಲ್ಯದಿಂದಲೂ ಸಾಹಿತ್ಯ, ಕವನ, ಸಾಂದಭಿ೯ಕ ಬರವಣಿಗೆಗಳಲ್ಲಿ ಆಸಕ್ತಿ ಹೆಚ್ಚು.
ಶಿವಮೊಗ್ಗದ ಸ್ಥಳೀಯ ಪತ್ರಿಕೆಗಳು ಸೇರಿದಂತೆ ಹಾಸನ, ಕೋಲಾರ, ದಾವಣಗೆರೆ, ತುಮಕೂರಿನ ಸ್ಥಳೀಯ ಪತ್ರಿಕೆಗಳಲ್ಲಿ ನಿತ್ಯಶ್ರೀಯವರ ಕಥೆ, ಲೇಖನ, ನುಡಿಗಟ್ಚು, ಕವನಗಳು ಪ್ರಕಟವಾಗುತ್ತಿದೆ. ಅನುದಿನ ಆನ್‌ಲೈನ್ ರೇಡಿಯೋ ಚಾನೆಲ್ ಒಂದರಲ್ಲಿ ಲೇಖನ ವಾರ್ತೆ ವಾಚಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭುವಿ ಪುಸ್ತಕ ಮತ್ತು ಕಡಲು ಸಂಪಾದಕೀಯ ಕವನ ಸಂಕಲನ ಹಿಂದೆ ಬಿಡುಗಡೆ ಆಗಿದೆ. ಇನ್ನು ಕೆಲವು ಬಿಡುಗಡೆ ಹಂತದಲ್ಲಿ ಇದೆ.
ಜಿಲ್ಲೆಯ ಉದಯೋನ್ಮುಖ ಯುವ ಕವಯಿತ್ರಿ ಅಂಕಣಗಾರ್ತಿ ಲೇಖಕಿ ಹಲವು ಜಿಲ್ಲೆಗಳ ಪತ್ರಿಕೆಯ ಬರಹಗಾರ್ತಿ ಕು ನಿತ್ಯಶ್ರೀ ಯವರಿಗೆ ಅನೇಕ ಪ್ರಶಸ್ತಿಗಳು ಲಭಿಸಿದೆ. ತುಮಕೂರಿನ ಗುರುಕುಲ ಸಾಹಿತ್ಯ ಕೇಸರಿ ಪ್ರಶಸ್ತಿ, ಬೆಂಗಳೂರಿನಲ್ಲಿ ಉತ್ತಿಷ್ಠ ಸಾಧಕ ರತ್ನ ಮತ್ತು ಮಂಡ್ಯದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಮೂರು ರಾಜ್ಯ ಪ್ರಶಸ್ತಿ ಲಭಿಸಿದೆ.
ಇದನ್ನು ಒದಿ : https://cnewstv.in/?p=7201
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments