Breaking News

ಬೀಜ ಸಂರಕ್ಷಣೆ ಕುರಿತು ರೈತರಿಗೆ ಸಲಹೆ.

Cnewstv.in / 22.12.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಬೀಜ ಸಂರಕ್ಷಣೆ ಕುರಿತು ರೈತರಿಗೆ ಸಲಹೆ.

ಶಿವಮೊಗ್ಗ : ಪ್ರತಿ ವರ್ಷದ ಹಂಗಾಮುಪೂರ್ವದಲ್ಲಿಯೇ ರೈತರ ಅನುಕೂಲಕ್ಕಾಗಿ ಕೃಷಿ ಇಲಾಖೆಯ ಮುಖಾಂತರ ಇಳುವರಿ ತಳಿಗಳ ದೃಢೀಕೃತ ಬಿತ್ತನೆ ಬೀಜವನ್ನು ವಿತರಿಸಲಾಗುತ್ತಿದೆ. ಈ ರೀತಿ ವಿತರಿಸಲುವ ಬೀಜವನ್ನು ಹಂಗಾಮಿನ ಬೆಳೆ ಕಟಾವಿನ ನಂತರ ಕಾಯ್ದಿರಿಸಿಕೊಂಡು ಮೂರು ವರ್ಷಗಳಿಗೆ ಬಳಸಬಹುದಾಗಿರುತ್ತದೆ.

ಕಟಾವು ಸಮಯದಲ್ಲಿ ಕೀಟ-ರೋಗ ಇಲ್ಲದಿರುವ ಆರೋಗ್ಯಕರ ತೆನೆಗಳನ್ನು ಆಯ್ಕೆ ಮಾಡಿ ಪ್ರತ್ಯೇಕವಾಗಿ ಕಟಾವು ಮಾಡುವುದು. ಕಟಾವು ಮಾಡಿರುವ ತೆನೆಗಳಿಂದ ಹಾನಿಯಾಗದಂತಹ ಕಾಳುಗಳನ್ನು ಬೇರ್ಪಡಿಸುವುದು. ಸ್ವಚ್ಚವಾಗಿ ಬಿಸಿಲಿನಲ್ಲಿ ಒಣಗಿಸುವುದು. ಶೇಖರಿಸಿದ ಬಿತ್ತನೆ ಬೀಜ ಯಾವುದೇ ರೋಗ-ಕೀಟಗಳಿಗೆ ತುತ್ತಾಗದಂತೆ ಕ್ರಮ ವಹಿಸುವುದು.

ಅಲ್ಲದೇ ಇಲಾಖಾ ಬಿತ್ತನೆ ಬೀಜ ಪೋರ್ಟಲ್‍ನಲ್ಲಿ ಒಬ್ಬ ರೈತರಿಗೆ ಒಂದು ತಳಿಯ ಬಿತ್ತನೆ ಬೀಜವನ್ನು ಒಂದು ಬಾರಿ ನೀಡಿದ ನಂತರ ಮುಂದಿನ ಮೂರು ವರ್ಷಗಳವರೆಗೆ ಅದೇ ತಳಿಯ ಬಿತ್ತನೆ ಬೀಜವನ್ನು ಪಡೆಯುವ ಅವಕಾಶವಿರುವುದಿಲ್ಲ. ಆದ್ದರಿಂದ ರೈತರು ಮುನ್ನೆಚ್ಚರಿಕೆ ವಹಿಸಿ ಈ ಹಂಗಾಮಿನಲ್ಲಿ ಬಳಸಿದ ಅಧಿಕ ಇಳುವರಿ ತಳಿಗಳನ್ನು ಮುಂದಿನ ಮೂರು ವರ್ಷಗಳಿಗೆ ಸಂರಕ್ಷಿಸಿಕೊಳ್ಳಬೇಕಾಗಿ ಜಂಟಿ ಕೃಷಿ ನಿರ್ದೇಶಕರು ವಿನಿಂತಿಸಿದ್ದಾರೆ.

ಇದನ್ನು ಒದಿ : https://cnewstv.in/?p=7192

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*