Cnewstv.in / 16.12.2021/ ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆಯ ಮನವಿಗೆ ಸ್ಪಂದಿಸಿದ ಜಿಲ್ಲಾಡಳಿತ.
ಶಿವಮೊಗ್ಗ : ಬಹಿರ್ದೆಸೆ ಯಿಂದ ಮುಕ್ತವಾದ ಶಿವಮೊಗ್ಗ ನಗರ ಮಹಾನಗರ ಪಾಲಿಕೆಯ ಆಡಳಿತವನ್ನು ಹಾಗೂ ಪಾಲಿಕೆಯ ಆರೋಗ್ಯಾಧಿಕಾರಿ ಗಳನ್ನು ಕಮರ್ಷಿಯಲ್ ಕಟ್ಟಡ ಪರವಾನಗಿ ನೀಡಿರುವ ಇಂಜಿನಿಯರುಗಳನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು.
ನಗರದಲ್ಲಿ ಶೇ. 80ರಷ್ಟು ಖಾಸಗಿ ಕಾಂಪ್ಲೆಕ್ಸ್ ಗಳು ಶೌಚಾಲಯವಿಲ್ಲದೆ ಇರುವುದರಿಂದ ಶಿವಮೊಗ್ಗ ನಗರ ಇಂದಿಗೂ ಬಹಿರ್ದೆಸೆಯಿಂದ ಮುಕ್ತವಾಗದೇ ಜನ ಓಡಾಡುವ ಪ್ರದೇಶಗಳನ್ನೇ ಮೂತ್ರವಿಸರ್ಜನೆಗೆ ಆಯ್ಕೆ ಮಾಡಿಕೊಂಡಿರುವ ಸಾರ್ವಜನಿಕವಾದ ಇಂತಹ ಸ್ಥಳಗಳನ್ನು ಸಾಂಕ್ರಾಮಿಕ ರೋಗಗಳನ್ನು ಹರಡುವ ಪ್ರದೇಶಗಳಾಗಿ ಪರಿವರ್ತನೆಗೊಂಡಿರುತ್ತದೆ. ಈ ಬಗ್ಗೆ ಪರಿಶೀಲಿಸಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಆಗ್ರಹಿಸಿರುತ್ತಾರೆ ಎಂದು ಪ್ರತ್ಯುತ್ತರ ನೀಡಲಾಗಿದೆ.
ಒಟ್ಟಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ವತಿಯಿಂದ ಸಾಮಾಜಿಕ ಕಳಕಳಿಯಿಂದ ಮಾಡಿದ ಹೋರಾಟಕ್ಕೆ ಜಿಲ್ಲಾಡಳಿತದಿಂದ ಸ್ಪಂದನೆ ದೊರಕಿದೆ. ಇನ್ನಾದರೂ ಶಿವಮೊಗ್ಗ ನಗರ ಬಹಿರ್ದೆಸೆಯಿಂದ ಮುಕ್ತವಾಗಲಿ ಎನ್ನುವುದು ಜನರ ಆಶಯ
ಇದನ್ನು ಒದಿ : https://cnewstv.in/?p=6125
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv