Cnewstv.in / 16.12.2021/ ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿರುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಿ – ವಿಶ್ವ ಹಿಂದೂ ಪರಿಷತ್ ಬಜರಂಗದಳ
ಶಿವಮೊಗ್ಗ : ಸರ್ಕಾರದ ನಿಬಂಧನೆಗಳನ್ನು ಗಾಳಿಗೆ ತೂರಿ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವಿಶ್ವಹಿಂದೂ ಪರಿಷತ್ ಬಜರಂಗದಳ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ನಿನ್ನೆ ಶಿವಮೊಗ್ಗದ ಮಹಾಲಕ್ಷ್ಮೀ ಲಾಡ್ಜ್ ಹೊನ್ನಾಳಿ ರಸ್ತೆ, ಚಟ್ನಹಳ್ಳಿ ಶಿವಮೊಗ್ಗ ಇಲ್ಲಿ, ಅನ್ಯ ಕೋಮಿನ ಹುಡುಗ ಹಾಗೂ ಕಾಲೇಜು ವಿದ್ಯಾರ್ಥಿನಿಗೆ ಸರಕಾರದ ನಿಬಂಧನೆಗಳನ್ನು ಗಾಳಿಗೆ ತೂರಿ ಕಾನೂನು ಬಾಹಿರವಾಗಿ ಲಾಡ್ಜ್ ನಲ್ಲಿ ರೂಮ್ ನೀಡಿ, ಅನೈತಿಕ ಚಟುವಟಿಕೆಗೆ ಸಹಕಾರ ನೀಡಿರುತ್ತಾರೆ ಹಾಗೂ ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಯುವಕರಿಗೆ ಯಾವುದೇ ನಿಬಂಧನೆ ಇಲ್ಲದೆ ರೂಮ್ ನೀಡಿ ಕಾನೂನು ಬಾಹಿರವಾಗಿ ಅನೈತಿಕ ಚಟುವಟಿಕೆಗೆ ಸಹಕರಿಸುತ್ತಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕಿದ್ದರೂ ಜಾಣ ಮೌನ ವಹಿಸಿದ್ದು, ಕಾನೂನು ಬಾಹಿರ ಚಟುವಟಿಕೆ ನಡೆಸಲು ಸಹಕಾರಿಯಾಗಿದ್ದಾರೆ. ತಕ್ಷಣವೇ ಈ ಲಾಡ್ಜ್ ನಲ್ಲಿರುವ ಸಿ.ಸಿ.ಟಿ.ವಿ ದೃಶ್ಯಾವಳಿಯನ್ನು ಪರಿಶೀಲಿಸಿ, ನಿನ್ನೆ ರೂಮ್ ಗೆ ಆಗಮಿಸಿದ ಯುವಕನನ್ನು ಬಂಧಿಸಿ ಹಾಗೂ ಲಾಡ್ಡ್ ಗೆ ಸಂಬಂಧಪಟ್ಟವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಇದನ್ನು ಒದಿ : https://cnewstv.in/?p=7161
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments