Cnewstv.in / 16.12.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಇಂದು ಮಧ್ಯಾಹ್ನದ ವರೆಗೆ ಜವಳಿ ಅಂಗಡಿ ಬಂದ್!!??
ಶಿವಮೊಗ್ಗ : ಜವಳಿ ಮೇಲಿನ ಜಿ.ಎಸ್.ಟಿ ಯನ್ನು ಶೇ. 5 ರಿಂದ 12ಕ್ಕೆ ಏರಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 2 ಗಂಟೆಯವರೆಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟನೆ ನಡೆಸಲಾಗುವುದು ಎಂದು ಜವಳಿ ವರ್ತಕರ ಸಂಘದ ಅಧ್ಯಕ್ಷ ವೆಂಕಟೇಶ್ ಮೂರ್ತಿ ತಿಳಿಸಿದ್ದಾರೆ
ಜವಳಿ ವರ್ತಕರ ಸಂಘ ಕರೆ ನೀಡಿರುವ ಬಂದ್ ಗೆ ಶಿವಮೊಗ್ಗದಲ್ಲಿರುವ 250ಕ್ಕೂ ಹೆಚ್ಚು ಸಂಘದ ನೊಂದಣಿಯಾಗಿರುವ ಜವಳಿ ಅಂಗಡಿಗಳು ಮಧ್ಯಾಹ್ನ 2 ಗಂಟೆಯವರೆಗೂ ಬಂದ್ ಆಗಲಿದೆ.
ಇಂದು ಬೆಳಿಗ್ಗೆ 10ಗಂಟೆಗೆ ಗಾಂಧಿಬಜಾರ್ ರಾಮಣ್ಣ ಶ್ರೇಷ್ಟಿ ಪಾರ್ಕ್ ನಿಂದ ಮೆರವಣಿಗೆ ಹೊರಟು, ನೆಹರು ರಸ್ತೆ ದುರ್ಗಿಗುಡಿ ಕುವೆಂಪು ರಸ್ತೆ ಹಾಗೂ ಸವಳಂಗ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿಸಿ ಸಲ್ಲಿಸಲಾಗುವುದು.
ಕಳೆದ ಎರಡು ವರ್ಷಗಳಿಂದ ಕೊರೋನಾ ಲಾಕ್ ಡೌನ್ ನಿಂದಾಗಿ ಜವಳಿ ವರ್ತಕರು ವ್ಯಾಪಾರವಿಲ್ಲದೇ, ಹೈರಾಣಾಗಿ ಆತಂಕದಿಂದ ಬದುಕು ದುಸ್ತರವಾಗಿರುವಂತಹ ಸಂದರ್ಭದಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಜಿ.ಎಸ್.ಟಿ. ಏರಿಕೆ ಮಾಡುತ್ತಿರುವುದು ಖಂಡನೀಯ. ಜಿ.ಎಸ್.ಟಿ. ಏರಿಕೆಯಿಂದ ತೆರಿಗೆ ತಪ್ಪಿಸುವ ಅನ್ಯ ಮಾರ್ಗಗಳಿಗೂ ದಾರಿಯಾಗಲಿದೆ.ಜಿ.ಎಸ್.ಟಿ. ಹೆಚ್ಚಳ ಮಾಡಿದರೆ ಗ್ರಾಹಕರಿಗೆ ಹೊರೆಯಾಗಲಿದೆ
ಟಿ.ಆರ್. ವೆಂಕಟೇಶಮೂರ್ತಿ – ಅಧ್ಯಕ್ಷರು, ಜವಳಿ ವರ್ತಕರ ಸಂಘದ
ಇದನ್ನು ಒದಿ : https://cnewstv.in/?p=7145
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments