Cnewstv.in / 14.12.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಮೊದಲ ಚುನಾವಣೆಯಲ್ಲಿ ಗೆಲವು ಸಾಧಿಸಿ, ಪರಿಷತ್ ಪ್ರವೇಶಿಸಿದ ಡಿ.ಎಸ್.ಅರುಣ್.

ಶಿವಮೊಗ್ಗ : ವಿಧಾನ ಪರಿಷತ್ ಚುನಾವಣಾ ಪಲಿತಾಂಶ ಇಂದು ಘೋಷಣೆ ಆಗಿದೆ. ಬಿಜೆಪಿ ಅಭ್ಯರ್ಥಿ ಡಿ.ಎಸ್ ಅರುಣ್ ರವರು 344 ಮತಗಳ ಅಂತರದಿಂದ ಭರ್ಜರಿ ಜಯ ಗಳಿಸಿದ್ದಾರೆ.
ಇಂದು ಸಹ್ಯಾದ್ರಿ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿತ್ತು. ಮೊದಲ ಸುತ್ತಿನಲ್ಲಿಯೇ ಡಿ.ಎಸ್ ಅರುಣ್ ಭರ್ಜರಿ ಜಯ ದಾಖಲಿಸಿದ್ದರು. ಬಿಜೆಪಿಯ ಡಿಎಸ್ ಅರುಣ್ ರವರು 2192 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅರ್ ಪ್ರಸನ್ನಕುಮಾರ್ 1848 ಮತಗಳನ್ನು ಪಡೆದಿದ್ದಾರೆ.
ತೀವ್ರ ಕುತೂಹಲ ಕೆರಳಿಸಿದ್ದ ಶಿವಮೊಗ್ಗ ವಿಧಾನಪರಿಷತ್ ಚುನಾವಣೆಯಲ್ಲಿ ಡಿ.ಎಸ್.ಅರುಣ್ ರವರು ಭರ್ಜರಿ ಗೆಲುವು ಸಾಧಿಸಿ ಪರಿಷತ್ ಪ್ರವೇಶಿಸಿದ್ದಾರೆ. ಡಿ.ಎಸ್. ಅರುಣ್ ರವರು ಗೆಲುವು ಸಾಧಿಸಿದ ಕೂಡಲೇ ಬಿಜೆಪಿ ಕಾರ್ಯಕರ್ತರು ನಾಯಕರ ಪರವಾಗಿ ಘೋಷಣೆಗಳನ್ನು ಕೂಗಿ, ಸಿಹಿ ಹಂಚಿ ಸಂಭ್ರಮಿಸಿದರು.
ಇದನ್ನು ಒದಿ : https://cnewstv.in/?p=7136
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv