Breaking News

ಪರಿಷತ್ ಕದನ ಆರಂಭ, 90 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ.‌

Cnewstv.in / 10.12.2021/  ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಪರಿಷತ್ ಗದನ ಆರಂಭ, 90 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ.‌

ಬೆಂಗಳೂರು : ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ಇಂದು ಆರಂಭವಾಗಿದೆ, ಎಲ್ಲಾ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.‌ 25 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಒಟ್ಟು 90 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಸ್ಪರ್ಧಿಸುತ್ತಿರುವ 90 ಅಭ್ಯರ್ಥಿಗಳಲ್ಲಿ 89 ಪುರುಷರು ಹಾಗೂ ಒಬ್ಬ ಮಹಿಳಾ ಅಭ್ಯರ್ಥಿ ಇದ್ದಾರೆ. ಬಿಜೆಪಿಯಿಂದ 20, ಕಾಂಗ್ರೆಸ್ ನಿಂದ 20, ಜೆಡಿಎಸ್ ನಿಂದ 6 ಹಾಗೂ ಇತರ ಪಕ್ಷಗಳ 11 ಹಾಗೂ ಪ್ರತ್ಯೇಕವಾಗಿ 33 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

99,062 ಮತದಾರರಿದ್ದು, 6072 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 51,854 ಮಹಿಳೆಯರು, 47,205 ಪುರುಷರು ಹಾಗೂ ಮೂವರು ತೃತೀಯಲಿಂಗಿ ಮತದಾರರಿದ್ದಾರೆ.

ಇದನ್ನು ಒದಿ : https://cnewstv.in/?p=7105

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*