Breaking News

ಸ್ಮಾರ್ಟ್ ಸಿಟಿ ಯೋಜನೆಯ ಅವ್ಯವಹಾರದ ಬಗ್ಗೆ ತನಿಖೆಯಾಗಬೇಕು : ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ.

Cnewstv.in / 06.12.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಜನರ ತೆರಿಗೆ ಹಣವನ್ನು ಲೂಟಿ ಹೊಡೆಯುತ್ತಿರುವ ಸ್ಮಾರ್ಟ್ ಸಿಟಿ ಯೋಜನೆಯ ಅವ್ಯವಹಾರದ ಬಗ್ಗೆ ತನಿಖೆಯಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆವತಿಯಿಂದ ಮನವಿ ಸಲ್ಲಿಸಲಾಯಿತು.

ಈ ಸ್ಮಾರ್ಟ್ ಸಿಟಿ ಎಂಬುವುದು ಕೋಟ್ಯಾಂತರ ರೂಪಾಯಿಗಳನ್ನು ಹೊಡೆಯುವ ಯೋಜನೆಯಾಗಿದೆ ಈ ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ಅಧಿಕಾರಿಗಳ ಹಾಗೂ ರಾಜಕಾರಣಿಗಳ ಬೊಕ್ಕಸ ತುಂಬುತ್ತಿದೆ ಹೊರತು ಯಾವುದೇ ಕಾಮಗಾರಿಗಳ ಗುಣಮಟ್ಟದ ಕೆಲಸ ಆಗದೆ ಇರುವುದು ವಿಷಾದನೀಯವಾಗಿದೆ ಇದಕ್ಕೆ ಉದಾಹರಣೆ ಎಂದರೆ ರಸ್ತೆ ಚರಂಡಿ ಫುಟ್ಪಾತ್ ಹಾಗೂ ಸೈಕ್ಲಿಂಗ್ ಟ್ರ್ಯಾಕ್ ಮಾಡದೆ ಗೋಡೆಗಳ ಮೇಲಿನ ಕೆಡಿಸಿದ ಬಣ್ಣದ ಚಿತ್ತಾರ ಹೆಸರಿನಲ್ಲಿ ಮುಳುಗಿ ಹೋಗಿದೆ.

ಪ್ರತಿ ಮನೆಗೆ ನೀರು ಸರಬರಾಜು 24 × 7 ಯೋಜನೆ ಅಡಿಯಲ್ಲಿ ಮನೆಮನೆಗೆ ಅಸಹ್ಯ ರೀತಿಯಲ್ಲಿ ಪೈಪುಗಳನ್ನು ಎಳೆದು ಮನೆಯ ಮುಂಭಾಗದಲ್ಲಿ ಸಿಮೆಂಟಿನ ಗುಡ್ಡೆಗಳನ್ನು ಮಾಡಿ ಹೋಗಿರುವುದು ಸ್ಮಾರ್ಟ್ ಸಿಟಿ ಕಾಮಗಾರಿ ಮತ್ತೊಂದು ಮುಖ ಅಲ್ಲದೆ ಇದುವರೆಗೆ ಶಿವಮೊಗ್ಗ ನಗರದ ಸ್ಮಾರ್ಟ್ ಸಿಟಿಯ ಭಾಷೆಯನ್ನಾಗಲಿ ಹಾಗೂ ಕಾಮಗಾರಿಗಳಿಗೆ ಬಳಸುವ ಸಾಮಗ್ರಿಗಳ ಗುಣಮಟ್ಟದ ಬಗ್ಗೆಯಾಗಲಿ ಯಾವ ಕಂಪನಿಯ ಸಾಮಗ್ರಿಗಳನ್ನು ಬಳಸಿದ್ದಾರೆ ಇದರ ಖರ್ಚು-ವೆಚ್ಚದ ಬಗ್ಗೆ ಆಗಲಿ ಇಲ್ಲಿಯವರೆಗೆ ಜನರಿಗೆ ತಿಳಿಸಲು ಇರುವುದು ಅನುಮಾನಕ್ಕೆ ಎಡೆ ಮಾಡಿಕೊಡುತ್ತದೆ.

ರಾಜಕಾರಣಿಗಳು ಅಧಿಕಾರಿಗಳು ತಮ್ಮ ಕುಲಬಾಂಧವರು ಇದ್ದಂತಹ ಮನೆ ಮುಂಭಾಗದ ರಸ್ತೆ ಕಾಮಗಾರಿಗೂ ಅವರವರ ಅನುಕೂಲಕ್ಕೆ ತಕ್ಕಂತೆ ಮಾಡಿದ್ದು ಉಳಿದ ಬೀದಿಗಳ ಕಾಮಗಾರಿಗಳು ಅತ್ಯಂತ ಕಳಪೆ ದಾಯಕವಾಗಿರುತ್ತದೆ ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ನಗರದ ಹೃದಯಭಾಗವಾದ ಕುವೆಂಪು ರಸ್ತೆ ಅಗಲೀಕರಣ ಮಾಡದೆ ಫುಟ್ಪಾತ್ ಆಗುವ ಸೈಕ್ಲಿಂಗ್ ಟ್ರ್ಯಾಕ್ ವಾಕಿಂಗ್ ಟ್ರ್ಯಾಕ್ ಯಾವುದೇ ಕಾಮಗಾರಿ ಇಲ್ಲದೆ ಶ್ರೀಮಂತರ ಕಾಂಪೌಂಡ್ ಮತ್ತು ಮನೆಯನ್ನು ಉಳಿಸಲು ಇರುವ ರಸ್ತೆಗೆ ಸ್ಮಾರ್ಟ್ ಸಿಟಿ ಕಾಮಗಾರಿ ಯೋಜನೆ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಇದು ಇವರ ಭ್ರಷ್ಟಾಚಾರಕ್ಕೆ ಎದ್ದುಕಾಣುವ ಸಂಗತಿಯಾಗಿದೆ.

ಶಿವಮೊಗ್ಗ ನಗರದ ಜನರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಬಂದ ನಿಷ್ಟಾವಂತ ಅಧಿಕಾರಿಗಳನ್ನು ಕೆಲಸ ಮಾಡಲು ಬಿಡದೆ ಅವರನ್ನು ಬೇರೆಡೆ ವರ್ಗಾವಣೆ ಮಾಡಲು ಇಲ್ಲಿ ಎಲ್ಲಾ ಪಕ್ಷಗಳ ರಾಜಕೀಯ ಧುರೀಣರು ಅಣ್ಣ-ತಮ್ಮಂದಿರ ಹಾಗೆ ಒಗ್ಗಟ್ಟಿನಿಂದ ಪ್ರಾಮಾಣಿಕ ಅಧಿಕಾರಿಗಳನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಪ್ರಶ್ನೆ ಮಾಡುವ ಜನರು ರಾಜಕೀಯ ಪಕ್ಷಕ್ಕೆ ಮಾರಾಟವಾಗುತ್ತಿದ್ದಾರೆ.

ನಾವು ಕಷ್ಟಪಟ್ಟು ಕಟ್ಟಿದ ತೆರಿಗೆ ಹಣ ಭ್ರಷ್ಟ ಅಧಿಕಾರಿಗಳ ಹಾಗೂ ರಾಜಕಾರಣಿಗಳ ಮನೆ ತುಂಬುತ್ತಿದೆ. ಈ ಯೋಜನೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಸಂಘಟನೆಯ ವತಿಯಿಂದ ಎಚ್ಚರಿಸುವುದೇನೆಂದರೆ

ಶಿವಮೊಗ್ಗ ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿ ಯನ್ನು ವೈಜ್ಞಾನಿಕವಾಗಿ ಉತ್ತಮ ಗುಣಮಟ್ಟದ ಕೆಲಸವನ್ನು ಮಾಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಸಂಘಟನೆಯು ಸ್ಮಾರ್ಟ್ ಸಿಟಿ ಕಚೇರಿಗೆ ಬೀಗ ನಡೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್ ಎಚ್, ಶಿವಕುಮಾರ್, ಜೈ ಕೃಷ್ಣ ಸತೀಶ್ ಗೌಡ, ಮಹಮ್ಮದ್ ಶಫಿ, ಪ್ರಜ್ವಲ್ ಗಣೇಶ್ ಶಿವಕುಮಾರ್ ರಾಘವೇಂದ್ರ ಗುರುಮೂರ್ತಿ ರಾಮಣ್ಣ ನಾಗರಾಜ್ ಕಿರಣ್ ಗುರು ಪುರ ಕಾಂತ ಆಫೀಸ್ ವಿಶ್ವನಾಥ್ ಸಾಧಿಕ್ ಮುಂತಾದವರು ಭಾಗವಹಿಸಿದ್ದರು

ಇದನ್ನು ಒದಿ : https://cnewstv.in/?p=7067

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*