Cnewstv.in / 06.12.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಬಾಬರಿ ಮಸೀದಿ ಪುನರ್ ನಿರ್ಮಾಣ ಮಾಡಿಕೊಡಬೇಕು : ಎಸ್.ಡಿ.ಪಿ.ಐ
ಶಿವಮೊಗ್ಗ : ಬಾಬರಿ ಮಸೀದಿ ಪುನರ್ ನಿರ್ಮಿಸಿ ಕೊಡಬೇಕು. ಇಲ್ಲವಾದರೆ ನ್ಯಾಯಕ್ಕಾಗಿ ಹೋರಾಟ ಅನಿವಾರ್ಯ ಎಂದು ಎಸ್.ಡಿ.ಪಿ.ಐ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಐತಿಹಾಸಿಕ ಬಾಬರಿ ಮಸೀದಿಯ ಧ್ವಂಸೆ ಭಾರತ ದೇಶಕ್ಕೆ ಕಪ್ಪು ಚುಕ್ಕೆಯಾಗಿದೆ. ಅನ್ಯಾಯವನ್ನು ಸರಿಪಡಿಸುವ ಭರವಸೆಯನ್ನು ಹುಸಿಗೊಳಿಸಿ ನೀಡಿದ ತೀರ್ಪು ನ್ಯಾಯಸಮ್ಮತವಲ್ಲ, ಬಾಬರಿ ಮಸೀದಿ ಪುನರ್ ನಿರ್ಮಾಣ ಆಗುವವರೆಗೆ ನ್ಯಾಯಕ್ಕಾಗಿರುವ ಹೋರಾಟ ಅನಿವಾರ್ಯ ಎಂದರು.
1045 ಪುಟಗಳ ಸುಪ್ರೀಂ ಕೋರ್ಟಿನ ತೀರ್ಪಿನಲ್ಲಿ ಬಾಬರಿ ಮಸೀದಿಯನ್ನು ಯಾವುದೇ ಮಂದಿರ ಒಡೆದು
ನಿರ್ಮಿಸಲಾಗಿಲ್ಲ, ಪುರಾತತ್ವ ಇಲಾಖೆ ಯಾವುದೇ ಮಂದಿರದ ಅವಶೇಷಗಳನ್ನು ಗುರುತಿಸಲಿಲ್ಲ, 1949ರ ವರೆಗೆ ಅಲ್ಲಿ ನಮಾಝಝ್ ನಡೆಸಲಾಗುತ್ತಿತ್ತು ಎಂಬುದನ್ನು ಸ್ಪಷ್ಟಪಡಿಸಿದೆ. ಮಾತ್ರವಲ್ಲ 1949 ಡಿಸೆಂಬರ್ 23ರಂದು ಮಸೀದಿ ಒಳಗಡೆ ಅಕ್ರಮವಾಗಿ ಮೂರ್ತಿಯನ್ನು ಸ್ಥಾಪಿಸಿರುವುದು ತಪ್ಪು, ಮಸೀದಿ ಧ್ವಂಸ ಪ್ರಕರಣ ಒಂದು ಕ್ರಿಮಿನಲ್ ಕೃತ್ಯ, ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂಬುದನ್ನು ಒತ್ತಿ ಹೇಳಿದೆ.
ಪೂಜಾ ಸ್ಥಳಗಳ ಕಾಯಿದೆ 1991 ಪ್ರಕಾರ 15 ಆಗಸ್ಟ್ 1947 ರಲ್ಲಿ ನೆಲೆಗೊಂಡಿರುವಂತೆ ಯಾವುದೇ ಪೂಜಾ ಸ್ಥಳಗಳನ್ನು ಪರಿವರ್ತಿಸಲು, ದಾಳಿ ಮಾಡಲು, ಧ್ವಂಸಗೊಳಿಸಲು, ಹಾನಿ ಮಾಡಲು ಯಾರಿಗೂ ಅನುಮತಿ ನೀಡುವುದಿಲ್ಲ. 2018 ರ ಶಬರಿಮಲೆ ತೀರ್ಪಿನ ವಿರುದ್ಧ ಪ್ರತಿಭಟನೆಗಳು ನಡೆದು ತೀರ್ಪನ್ನು ತಡೆಹಿಡಿಯಲಾಗಿತ್ತು.
ಎಸ್.ಸಿ- ಎಸ್.ಟಿ ಕಾನೂನಿನ ವಿರುದ್ಧ ಹೋರಾಟದಲ್ಲಿ 11 ಜನ ಜೀವವನ್ನು ಕಳೆದುಕೊಂಡಿದ್ದರು. ತದನಂತರ ತೀರ್ಪನ್ನು ವಾಪಾಸು ಪಡೆಯಲಾಯಿತು. ಆದುದರಿಂದ ಬಾಬರಿ ಮಸೀದಿ ಧ್ವಂಸ ಅನ್ಯಾಯ ಎಂಬುದು ಸ್ಪಷ್ಟವಾಗಿ ರಿಂದ ಮಸೀದಿ ಪುನರ್ ನಿರ್ಮಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಲಾಯಿತು
ಇದನ್ನು ಒದಿ : https://cnewstv.in/?p=7059
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv