Breaking News

ಪರಿಷತ್ ಅಭ್ಯರ್ಥಿ ಕುರ್ಚಿಗಾಗಿ ನಡೆಯುತ್ತಿದ್ದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಅಭ್ಯರ್ಥಿಗೆ ಇಲ್ಲ ಕುರ್ಚಿ.‌

Cnewstv.in / 04.12.2021/ ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಅಭ್ಯರ್ಥಿ ಕುರ್ಚಿಗಾಗಿ ನಡೆಯುತ್ತಿದ್ದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಅಭ್ಯರ್ಥಿಗೆ ಇಲ್ಲ ಕುರ್ಚಿ.‌

ಶಿವಮೊಗ್ಗ : ಜಿಲ್ಲಾ ಕಾಂಗ್ರೆಸ್ ವತಿಯಿಂದ ಅಯೋಜನೆ ಮಾಡಿದ ಮತಯಾಚನೆ ಕಾರ್ಯಕ್ರಮ ಅಶಿಸ್ತಿನ ಗೂಡಾಗಿತ್ತು.

ಶಿವಮೊಗ್ಗದ ಸರ್ಜಿ ಕನ್ವೆನ್ಷನ್ ಹಾಲ್ ನಲ್ಲಿ ವಿಧಾನ ಪರಿಷತ್ ಅಭ್ಯರ್ಥಿಯಾದ ಆರ್.ಪ್ರಸನ್ನಕುಮಾರ್ ಅವರ ಪರವಾಗಿ ಮತಯಾಚನೆ ಮಾಡಲು ಕಾರ್ಯಕ್ರಮವನ್ನು ಅಯೋಜನೆ ಮಾಡಲಾಗಿತ್ತು.

ಮತಯಾಚನೆ ಮಾಡಲು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಹಾಗು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ನವರು ಪ್ರಚಾರ ಸಭೆಗೆ ಆಗಮಿಸಿದ್ದರು ಅದರೆ ಈ ಕಾರ್ಯಕ್ರಮ ಗೊಂದಲದ ಗೂಡಾಗಿತ್ತು. ಕಾರ್ಯಕ್ರಮಕ್ಕೆ ಅಗಮಿಸಿದ್ದ ಜನಪತ್ರಿನಿದಿಗಳಿಗೆ ಕುಳಿತುಕೊಳ್ಳಲು ಸರಿಯಾದ ಆಸನದ ವ್ಯವಸ್ಥೆಗಳನ್ನು ಸಹ ಮಾಡಿರಲಿಲ್ಲ. ವೇದಿಕೆ ಮೇಲೆ ಗಣ್ಯರು ಕೂತಿದ್ದರು ಸಹ ಕಣ್ಣಿಗೆ ಕಾಣದ ಪರಿಸ್ಥಿತಿ ನಿರ್ಮಾಣವಾಗಿತ್ತು.

ವೇದಿಕೆ ಮುಂಭಾಗ ಕೂತಿರುವ ಸದಸ್ಯರಿಗೆ ಸಭಾಕಾರ್ಯಕ್ರಮ ಕಾಣದ ಹಿನ್ನೆಲೆಯಲ್ಲಿ ನೀರಿನ ಬಾಟಲಿಗಳನ್ನು ಎಸೆದು ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು. ಈಗಾಗಲೇ ಸಾಕಷ್ಟು ಚುನಾವಣೆಗಳಲ್ಲಿ ಕಾಂಗ್ರೆಸ್ ಹಿಂದೆ ಬೀಳುತ್ತಿದೆ. ಇನ್ನು ಮುಂದಾದರೂ ಶಿಸ್ತಿನ ಪಾಠವನ್ನು ಕಲಿಯಬೇಕಿದೆ.

ರಾಜ್ಯಮಟ್ಟದ ನಾಯಕರು ಇರುವ ಕಾರ್ಯಕ್ರಮದಲ್ಲಿ ಈ ಮಟ್ಟದ ಅಶಿಸ್ತು ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ಅಧಿಕಾರ ಸಿಕ್ಕಲ್ಲಿ ಈ ಪಕ್ಷ ಇನ್ನೂ ಯಾವ ಮಟ್ಟದ ಅಶಿಸ್ತು ಪ್ರದರ್ಶಿಸಬಹುದು ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು.

ಮಾಜಿ ಮಂತ್ರಿಗಳು, ರಾಜ್ಯ ಮಟ್ಟದ ನಾಯಕರು ಇರುವ ಮತಯಾಚನೆ ಕಾರ್ಯಕ್ರಮ ಇಷ್ಟು ಅಶಿಸ್ತಿನಿಂದ ಕೂಡಿದ್ದು, ನಿಜಕ್ಕೂ ಶೋಚನೀಯಾ..

ಇದನ್ನು ಒದಿ : https://cnewstv.in/?p=7029

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*