Cnewstv.in / 03.12.2021/ ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಮಡಿವಾಳ ಮಾಚಿದೇವ ಅಭಿವೃದ್ದಿ ನಿಗಮದಿಂದ ಅರ್ಜಿ ಆಹ್ವಾನ.
ಶಿವಮೊಗ್ಗ : ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ದಿ ನಿಗಮದಿಂದ 2021-22 ನೇ ಸಾಲಿನಲ್ಲಿ ಸುವಿಧಾ ತಂತ್ರಾಶದ ಮುಖಾಂತರ ವಿವಿಧ ಯೋಜನೆಗಳಡಿ ಸೌಲಭ್ಯ ನೀಡಲು ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನಿಸಲಾಗಿದ್ದು ಅರ್ಜಿ ಸಲ್ಲಿಸಲು 2022 ರ ಜನವರಿ 15 ಕಡೆಯ ದಿನವಾಗಿದೆ.
ಕರ್ನಾಟಕ ಮಡಿವಾಳ ಮಾಚಿದೇವ ಜನಾಂಗಕ್ಕೆ ಸೇರಿದ ವಿದ್ಯಾರ್ಥಿಗಳು ಈಗಾಗಲೇ ಕಳೆದ ಸಾಲಿನಲ್ಲಿ ಅರಿವು ಶೈಕ್ಷಣಿಕ ಸಾಲ(ನವೀಕರಣ) ಯೋಜನೆಯಡಿಯಲ್ಲಿ ಸೌಲಭ್ಯ ಪಡೆದಿರುವವರಿಗೆ 2021-22 ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿದ್ದರೆ 2ನೇ ಕಂತಿನ ಹಣ ನೀಡಲು ಸುವಿಧಾ ತಂತ್ರಾಂಶದ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು https://suvidha.karnataka.gov.in ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು. ಈ ಯೋಜನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ನಿಗಮದ https://kmmdc.karnataka.gov.in ಜಾಲತಾಣದಲ್ಲಿ ಮಾಹಿತಿಯನ್ನು ಪಡೆಯಬಹುದು.
ಮಡಿವಾಳ ಸಮುದಾಯದ ಪ್ರವರ್ಗ-2ಎ ಗೆ ಸೇರಿದ ಮಡಿವಾಳ ಮತ್ತು ಉಪ ಜಾತಿಗಳಾದ ಅಗಸ, ಚಕಲ, ಧೋಬಿ, ಮಡಿವಾಳ, ಮನ್ನನ್, ಪರಿತ್, ರಾಜಕ, ಸಕಲ, ವನ್ನನ್, ವೆಲ್ಲುತೇಡನ್, ಸಾಕಲಪಾಡು ಇವರು ಈ ಸೌಲಭ್ಯ ಪಡೆಯಬಹುದು.
ಸಾಂಪ್ರದಾಯಿಕ ವೃತ್ತಿದಾರರ ಸಾಲ ಯೋಜನೆಯಡಿ ಹಿಂದುಳಿದ ವರ್ಗಗಳ ಪ್ರವರ್ಗ-2ಎಗೆ ಸೇರಿದ ಮಡಿವಾಳ ಮತ್ತು ಇದರ ಉಪಜಾತಿಯವರ ಕುಲಕಸುಬು/ಸಾಂಪ್ರದಾಯಿಕ ವೃತ್ತಿದಾರರಾದ ದೋಭಿ ಘಟಕ, ಡ್ರೈಕ್ಲೀನಿಂಗ್ ಘಟಕಗಳ ಸ್ಥಾಪನೆ, ಇಸ್ತ್ರಿ ಮುಂತಾದ ವೃತ್ತಿ ಕಸುಬುದಾರರು ತಮ್ಮ ವೃತ್ತಿಯ ಅಭಿವೃದ್ದಿಗಾಗಿ ಆಧುನಿಕ ಉಪಕರಣಗಳನ್ನು ಖರೀದಿಸಲು, ತಾಂತ್ರಿಕತೆಯನ್ನು ಮೇಲ್ದರ್ಜೆಗೇರಿಸಲು ವೃತ್ತಿ ಅನುಸಾರ ಗರಿಷ್ಟ ರೂ.2,00,000 ಗಳವರೆಗೆ ಆರ್ಥಿಕ ನೆರವು, ಇದರಲ್ಲಿ ಗರಿಷ್ಟ ಶೇ.15 ರಷ್ಟು ಸಹಾಯಧನ, ಉಳಿಕೆ ಮೊತ್ತ ಶೇ.2 ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುವುದು.
ಸ್ವಯಂ ಉದ್ಯೋಗ ಸಾಲ ಯೋಜನೆಯಡಿ ಮೇಲ್ಕಂಡ ಸಮುದಾಯದವರಿಗೆ ವ್ಯಾಪಾರ, ಕೈಗಾರಿಕೆ, ಸಾರಿಗೆ ಮತ್ತು ಸೇವಾವಲಯ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಗರಿಷ್ಟ ರೂ.2,00,000 ಗಳವರೆಗೆ ಆರ್ಥಿಕ ನೆರವು ಇದರಲ್ಲಿ ಗರಿಷ್ಟ ಶೇ.15 ರಷ್ಟು ಸಹಾಯಧನ, ಉಳಿಕೆ ಮೊತ್ತ ವಾರ್ಷಿಕ ಶೇ.4 ರ ಬಡ್ಡಿದರದಲ್ಲಿ ಸಾಲ ನೀಡಲಾಗುವುದು.
ಸ್ವ ಸಹಾಯ ಗುಂಪುಗಳ ಆರ್ಥಿಕ ನೆರವು ಯೋಜನೆಯಡಿ ಮಹಿಳೆಯರು ಆರ್ಥಿಕ ಚಟುವಟಿಕೆ ಕೈಗೊಳ್ಳಲು ಸ್ವಸಹಾಯ ಗುಂಪುಗಳ ಒಟ್ಟು 15 ಸದಸ್ಯರಿಗೆ ತಲಾ ರೂ.5000/- ಗಳ ಸಹಾಯಧನ ಹಾಗೂ ತಲಾ ರೂ.15,000 ಗಳ ಸಾಲವನ್ನು ಶೇ.4 ರಷ್ಟು ಬಡ್ಡಿದರದಲ್ಲಿ ಹೀಗೆ ಪ್ರತಿ ಗುಂಪಿಗೆ ರೂ.75000/- ಗಳ ಸಹಾಯಧನ ಹಾಗೂ ರೂ.2,25,000 ಗಳ ಸಾಲ ಒಟ್ಟು ರೂ.3,00,000/- ಸಾಲ ಸೌಲಭ್ಯ ನೀಡಲಾಗುವುದು.
ಅರ್ಜಿದಾರರು ಹಿಂದುಳಿದ ವರ್ಗಗಳ ಪ್ರವರ್ಗ-2ಎ ಗೆ ಸೇರಿದ ಮಡಿವಾಳ ಮತ್ತು ಇದರ ಉಪಜಾತಿಗೆ ಸೇರಿದವರಾಗಿರಬೇಕು. ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.98,000/- ಪಟ್ಟಣ ಪ್ರದೇಶದವರಿಗೆ ರೂ.1,20,000 ಗಳ ಒಳಗಿರಬೇಕು. ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು. ಆಧಾರ್ ಕಾರ್ಡ್/ಚುನಾವಣಾ ಗುರುತಿನ ಚೀಟಿ/ಪಾನ್ ಕಾರ್ಡ್ ದಾಖಲೆಯನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಸಲ್ಲಿಸಬೇಕು.
ಮೇಲ್ಕಂಡ ಯೋಜನೆಗಳಿಗೆ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ದಿ ನಿಗಮ/ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಭಾಗ್ಯ ನಿಲಯ, 1ನೇ ತಿರುವು, ಗಾಂಧಿನಗರ ಶಿವಮೊಗ್ಗ ಅಥವಾ ವೆಬ್‍ಸೈಟ್‍ನಲ್ಲಿ ಹಾಗೂ ಆಯಾ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಪಡೆಯಬಹುದು. ಸಹಾಯವಾಣಿ ಸಂಖ್ಯೆ 08182-229634 ನ್ನು ಸಹ ಸಂಪರ್ಕಿಸಬಹುದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಇದನ್ನು ಒದಿ : https://cnewstv.in/?p=7020
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv